ಗುರುವಾರ ಬೆಳಗ್ಗೆ ಹೈದರಾಬಾದ್ ನ ವಿಜ್ಞಾನ ಜ್ಯೋತಿ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೋರ್ವನ ಶವ ಪತ್ತೆಯಾಗಿದೆ. ನಾಗಕರ್ನೂಲ್ ಮೂಲದ, 18 ವರ್ಷದ ಶಿವ ನಾಗು ಎಂಬ ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
12 ಅಂತಸ್ತಿನ ಹಾಸ್ಟೆಲ್ ಕಟ್ಟಡದ ಟೆರೇಸ್‌ನಿಂದ ಜಿಗಿದ ಯುವಕ, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಬಾಚುಪಲ್ಲಿ ಎಸ್‌ಐ ಶಿವಶಂಕರ್ ತಿಳಿಸಿದ್ದಾರೆ. ಡಿಸೆಂಬರ್ 23 ರ ಗುರುವಾರ ಬೆಳಿಗ್ಗೆ 6.30 ರ ಸುಮಾರಿಗೆ ಶಿವ ನಾಗು ತನ್ನ ಕೋಣೆಯಿಂದ ಒಬ್ಬಂಟಿಯಾಗಿ ಹೊರಟಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಮೃತನ ಹಾಸ್ಟೆಲ್ ಕೊಠಡಿಯಿಂದ ಆತ್ಮಹತ್ಯೆ ನೋಟ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬೈಕ್ ಕಳ್ಳರಿಗೆ ಆಶ್ರಯ ನೀಡುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್
ಪತ್ರದಲ್ಲಿರುವಂತೆ, ಮೃತ ಶಿವನಾಗುವಿಗೆ ಈ ಮೊದಲೆ 9 ಮತ್ತು 10ನೇ ತರಗತಿಯಲ್ಲಿರುವಾಗ ಆತ್ಮಹತ್ಯೆ ಯೋಚನೆ ಬಂದಿತ್ತಾದರು, ಅಂತಾ ನಿರ್ಧಾರ ಕೈಗೊಂಡಿರಲಿಲ್ಲ. ಹಲವು ಸಂದರ್ಭಗಳಲ್ಲಿ ನಿನ್ನ ಜೊತೆ ಕಠಿಣವಾಗಿ ವರ್ತಿಸಿದ್ದಕ್ಕೆ ನನ್ನ ಕ್ಷಮಿಸು ಅಕ್ಕ, ಅಪ್ಪ-ಅಮ್ಮ ನಾನು ಸದಾ ನಿಮ್ಮನ್ನು ಪ್ರೀತಿಸುವೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆಯಲಾಗಿದೆ.
ಆತ್ಮಹತ್ಯೆ ಪತ್ರವನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 174 (ಆತ್ಮಹತ್ಯೆಯ ಕುರಿತು ವಿಚಾರಣೆ ಮತ್ತು ವರದಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಕಾಲೇಜು ಆಡಳಿತ ಮಂಡಳಿಯ ಕಿರುಕುಳ ಮತ್ತು ಒತ್ತಡದಿಂದಾಗಿ ಶಿವ ನಾಗು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ಆರೋಪಿಸಿರುವ ಮೃತನ ಕುಟುಂಬದವರು ಹಾಗೂ ವಿದ್ಯಾರ್ಥಿ ಸಂಘ ಸಂಸ್ಥೆಗಳು ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.