ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬಾರದು ಎಂಬ ಮಾತಿದೆ. ಅದು ಈ ಓಮಿನಿ ಕಾರಿಗೆ ಅಕ್ಷರಶಃ ನಿಜವಾಗಿದೆ. ಮಾರುತಿ ಸುಜುಕಿ ಓಮ್ನಿ (ವ್ಯಾನ್) ಅನ್ನು ಒಳಗಿನಿಂದ ಎಪಿಕ್ ಕ್ಲಬ್ ಶೈಲಿಯ ಲಿಮೋ ಆಗಿ ಮಾರ್ಪಡಿಸಲಾಗಿದೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ತಮ್ಮನ್ನು ಇದರಲ್ಲಿ ಅಪಹರಣ ಮಾಡುವಂತೆ ಕೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳೊಂದಿಗೆ ಈ ವಿಡಿಯೋ ಭಾರಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ನೀಲಿ ಬಣ್ಣದ ಓಮಿನಿ ಕಾರಿನ ಮುಂಭಾಗದ ಬಾಗಿಲನ್ನು ತೆರೆದಿದ್ದಾನೆ. ಚಾಲಕನ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಹೊಸ ಭಾಗಗಳನ್ನು ಇಡೋದ್ರಲ್ಲಿ ಬ್ಯುಸಿಯಾಗಿದ್ದಾನೆ. ಚಾಲಕನ ಪಕ್ಕದ ಆಸನವನ್ನು ತೆಗೆದುಹಾಕಲಾಗಿದೆ.
ವ್ಯಾನ್‌ನ ಹಿಂಭಾಗದಲ್ಲಿ ಬಾಗಿಲಲ್ಲಿ ಸಣ್ಣ ಟಿವಿಯನ್ನು ಇಡಲಾಗಿದೆ. ಆಸನದ ಬದಲಿಗೆ ದೊಡ್ಡ ಸ್ಪೀಕರ್‌ಗಳ ಜೊತೆ ದೊಡ್ಡ ಟಿವಿಯನ್ನು ಇಡಲಾಗಿದೆ. ವ್ಯಾನಿನ ಒಳಭಾಗದಲ್ಲಿ ಬಣ್ಣದ ದೀಪಗಳು ಮಿನುಗುತ್ತಿವೆ. ಹಿಂಭಾಗದಲ್ಲಿ ಆಸನವನ್ನು ಇಡಲಾಗಿದೆ. ಆರಾಮದಾಯಕವಾದ ಮೂರು ಆಸನಗಳ ಸೋಫಾ ಸೆಟ್ ಅನ್ನು ಇಡಲಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಕಾರಿನ ಮಾರ್ಪಾಡನ್ನು ಇಷ್ಟಪಟ್ಟಿದ್ದಾರೆ. ವ್ಯಾನ್ ಅನ್ನು ಡಿಸ್ಕೋ ಲಿಮೋ ಆಗಿ ಪರಿವರ್ತಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅನೇಕ ನೆಟ್ಟಿಗರು ತಮಾಷೆಯಾಗಿ ಈ ಅದ್ಭುತ ವ್ಯಾನ್‌ನಲ್ಲಿ ಅಪಹರಣವಾಗಲು ಇಷ್ಟಪಡುವುದಾಗಿ ಹೇಳಿದ್ದಾರೆ.
ಹಲವಾರು ಬಾಲಿವುಡ್ ಚಲನಚಿತ್ರಗಳು ಮತ್ತು ಹಿಂದಿ ಟಿವಿ ಧಾರಾವಾಹಿಗಳಲ್ಲಿ ಅಪಹರಣದ ದೃಶ್ಯಗಳಲ್ಲಿ ಈ ಓಮಿನಿ ಕಾರನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ವ್ಯಾನ್ ಅನ್ನೋದು ಅಪಹರಣ ಮಾಡೋ ವಾಹನ ಅಂತಾನೇ ಜನರಲ್ಲಿ ಜನಜನಿತವಾಗಿದೆ.