![](https://kannadadunia.com/wp-content/uploads/2022/11/fac073e9-8c64-4002-91ba-afa3f288c7a4.jpg)
ಡಿಜಿಟಲ್ ಇಂಡಿಯಾ ಹಾಗೂ ಜನ್‌ಧನ್ ಯೋಜನೆಯ ಮುಖಾಂತರ ದೇಶದಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಬಳಕೆ ಜಾಸ್ತಿಯಾಗಿದೆ. ಆದರೆ ಅವುಗಳ ಜೊತೆಗೆ ಕೆಲವೊಂದು ಸಮಸ್ಯೆಗಳೂ ಇವೆ. ಇವುಗಳಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ಕಾರ್ಡ್ ಕಳೆದುಹೋಗುವುದು.
ಕೆಲವು ವಿದೇಶಿ ವೆಬ್‌ಸೈಟ್‌ಗಳಲ್ಲಿ ಪಿನ್ ಅಥವಾ ಓಟಿಪಿ ಇಲ್ಲದೆಯೂ ಹಣ ವರ್ಗಾವಣೆ ಮಾಡಬಹುದೆಂದು ಗ್ರಾಹಕರು ಮೊದಲು ತಿಳಿದುಕೊಳ್ಳಬೇಕು.
ಆದ್ದರಿಂದ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಳೆದು ಹೋದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಅವುಗಳನ್ನು ನಿಷ್ಕ್ರಿಯಗೊಳಿಸಬೇಕು. ಒಂದು ವೇಳೆ ಕಳುವಾಗಿದ್ದರೆ ಪೊಲೀಸ್ ದೂರು ನೀಡಿ ಅದರ ಎಫ್‌ಐಆರ್ ಪ್ರತಿಯನ್ನು ಬ್ಯಾಂಕ್‌ಗೆ ನೀಡಬೇಕು.
ಅಥವಾ ನೀವೇ ಅದನ್ನು ಕಳೆದುಕೊಂಡರೆ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿಯೋ ಇಲ್ಲ ಇಂಟರ್ನೆಟ್ ಬ್ಯಾಂಕಿಂಗ್ ಮುಖಾಂತರ ಇಲ್ಲ ಹತ್ತಿರದ ಶಾಖೆಗೆ ಹೋಗಿ ಕಾರ್ಡನ್ನು ಬ್ಲಾಕ್ ಇಲ್ಲ ಹಾಟ್‌ಲಿಸ್ಟ್‌ಗೆ ಸೇರಿಸಬೇಕು.
ಹಾಗೂ ಬ್ಯಾಂಕಿಗೆ ಯಾವುದಾದರು ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ನೀಡಿದ್ದರೆ ತಕ್ಷಣ ಅದನ್ನು ರದ್ದುಗೊಳಿಸಲು ಕೋರಬೇಕು. ಅದರ ನಂತರ ಹೊಸ ಡೆಬಿಟ್ ಇಲ್ಲ ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ ಒಳ್ಳೆಯದು.