ಕ್ರಿಸ್ಮಸ್ ಸಮೀಪಿಸುತ್ತಿದೆ ನಂತರ ಹೊಸ ವರ್ಷ ಬರ್ತಿದೆ. ಹಬ್ಬದ ಸಂದರ್ಭದಲ್ಲಿ ಜನರು ಪರಸ್ಪರ ಉಡುಗೊರೆ ನೀಡುವುದು ಪದ್ಧತಿ. ಈ ವರ್ಷ ಯಾವ ಉಡುಗೊರೆ ನೀಡಬೇಕೆಂಬ ಆಲೋಚನೆಯಲ್ಲಿದ್ದರೆ ಕಡಿಮೆ ಬಜೆಟ್ ನಲ್ಲಿ ನೀಡಬಹುದಾದ ಉಡುಗೊರೆಗಳ ಪಟ್ಟಿ ಇಲ್ಲಿದೆ.
ಲ್ಯಾಪ್ಟಾಪ್ ಸ್ಟ್ಯಾಂಡ್ : ಕೊರೊನಾದಿಂದಾಗಿ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಬಹುತೇಕರು ಲ್ಯಾಪ್ ಟಾಪ್ ಬಳಸುತ್ತಾರೆ. ಲ್ಯಾಪ್ ಟಾಪನ್ನು ಕಾಲಿನ ಮೇಲಿಟ್ಟು ಕೆಲಸ ಮಾಡುವುದು ಕಷ್ಟ. ಹಾಗಾಗಿ ವಿಶೇಷ ಸಂದರ್ಭದಲ್ಲಿ ಲ್ಯಾಪ್ ಟಾಪ್ ಸ್ಟ್ಯಾಂಡನ್ನು ನೀವು ಉಡುಗೊರೆ ನೀಡಬಹುದು. 500 ರೂಪಾಯಿಗಿಂತ ಕಡಿಮೆ ಬೆಲೆಗೆ ಇದು ಲಭ್ಯವಿದೆ.
ಅಮೆಜಾನ್ ಪ್ರೈಂ ಚಂದಾದಾರಿಕೆ : ಅಮೆಜಾನ್ ಪ್ರೈಂ, ನೆಟ್ಫ್ಲಿಕ್ಸ್, ಡಿಸ್ನಿ ಸೇರಿದಂತೆ ವಿಡಿಯೋ ಸ್ಟ್ರೀಮಿಂಗ್ ಕ್ರೇಜ್ ಹೆಚ್ಚಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಇದ್ರ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡಬಹುದು. ಬೇರೆ ಬೇರೆ ಕಂಪನಿ ಬೇರೆ ಬೇರೆ ಚಂದಾದಾರಿಕೆ ಪ್ಲಾನ್ ಬೆಲೆ ಭಿನ್ನವಾಗಿದೆ.
ಆರ್ಮ್ ಸ್ಟ್ಯಾಂಡ್ : ಆರ್ಮ್ ಸ್ಟ್ಯಾಂಡ್ ಕೂಡ ಕ್ರಿಸ್ಮಸ್‌ಗೆ ಬೆಸ್ಟ್ ಉಡುಗೊರೆ. 500 ರೂಪಾಯಿಗಿಂತ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದು.
ಪವರ್ ಬ್ಯಾಂಕ್ : ಇದು ಅತ್ಯಂತ ಜನಪ್ರಿಯ ಕ್ರಿಸ್ಮಸ್ ಉಡುಗೊರೆಗಳಲ್ಲಿ ಒಂದಾಗಿದೆ. ಪ್ರವಾಸ ಅಥವಾ ಪ್ರಯಾಣದಲ್ಲಿ ಮೊಬೈಲ್ ಫೋನ್ ಜಾರ್ಜ್ ಹೋದ್ರೆ ಪವರ್ ಬ್ಯಾಂಕ್ ಮೂಲಕ ಚಾರ್ಜ್ ಮಾಡಬಹುದು. ವಿಶೇಷ ವ್ಯಕ್ತಿಗೆ ಇದನ್ನು ಉಡುಗೊರೆಯಾಗಿ ನೀಡಬಹುದು.