
ಇದೀಗ ರಬಾಡ ಅವರು ಐನ್ಟ್ ನೋ ಸನ್‌ಶೈನ್‌ನ ಒಂದೆರಡು ಪದ್ಯಗಳನ್ನು ಹಾಡಿದ್ದಾರೆ. ಈ ಮೂಲಕ ಆಫ್-ದಿ-ಫೀಲ್ಡ್ ಪ್ರತಿಭೆಯನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ.
ರಬಾಡ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ತಂಡವು ಇವರನ್ನು 9.25 ಕೋಟಿ ರೂ.ಗೆ ತೆಗೆದುಕೊಂಡಿದೆ. 26 ವರ್ಷ ವಯಸ್ಸಿನ ರಬಾಡ ಪಂಜಾಬ್ ತಂಡದ ಅತ್ಯಂತ ಅನುಭವಿ ವೇಗದ ಬೌಲರ್ ಆಗಿದ್ದಾರೆ.
ಕೇವಲ ಕ್ರಿಕೆಟ್ ಮಾತ್ರವಲ್ಲ ಹಾಡು ಹಾಡೋದ್ರಲ್ಲೂ ಇವರು ನಿಸ್ಸೀಮರು. ಇವರು ಹಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇವರ ಹಾಡು ಕೇಳಿ ಅಭಿಮಾನಿಗಳಂತು ಫುಲ್ ಖುಷಿಯಾಗಿದ್ದಾರೆ.