ಭಾರತ ಸೇರಿದಂತೆ ವಿಶ್ವದಲ್ಲಿ ಕ್ರಿಕೆಟ್ ಅಪಾರ ಜನಪ್ರಿಯತೆಯನ್ನು ಪಡೆದಿದೆ. ಕ್ರಿಕೆಟ್ ಆಟಗಾರರು ಅಪಾರ ಫ್ಯಾನ್ಸ್ ಗಳನ್ನು ಹೊಂದಿದ್ದು, ಗಡಿ, ದೇಶ ಮರೆತು ನೆಚ್ಚಿನ ಆಟಗಾರರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ.
ಆದರೆ ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಇಲ್ಲ ಎಂಬ ಕೊರಗು ಅಭಿಮಾನಿಗಳನ್ನು ಕಾಡುತ್ತಿದ್ದು, ಈಗ ಅದು ಅಂತ್ಯಗೊಳ್ಳುವ ಸಾಧ್ಯತೆ ಇದೆ. ಹೌದು, 2028ರ ಲಾಸ್ ಎಂಜಲೀಸ್ ಒಲಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಕ್ರಿಕೆಟ್ ಸೇರಿದಂತೆ ಎಂಟು ಹೊಸ ಕ್ರೀಡೆಗಳ ಸೇರ್ಪಡೆಗೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಪಟ್ಟಿ ಮಾಡಿದ್ದು, ಬೇಸ್ ಬಾಲ್ / ಸಾಫ್ಟ್ ಬಾಲ್, ಫ್ಲಾಗ್ ಫುಟ್ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸಿಂಗ್, ಕರಾಟೆ, ಕಿಕ್ ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್ ಸ್ಪೋರ್ಟ್ಸ್ ಇತರ ಕ್ರೀಡೆಗಳಾಗಿವೆ.
1900 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯ ನಡೆಸಲಾಗಿದ್ದು, ಆಗ ಇಂಗ್ಲೆಂಡ್ ಹಾಗೂ ಅತಿಥೇಯ ಫ್ರಾನ್ಸ್ ತಂಡಗಳಷ್ಟೇ ಈ ಪಂದ್ಯವನ್ನು ಆಡಿದ್ದವು. ಇದೀಗ ದೀರ್ಘಕಾಲದ ಬಳಿಕ ಕ್ರಿಕೆಟ್ ಮತ್ತೆ ಒಲಂಪಿಕ್ಸ್ ನಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.