ವೆಸ್ಟ್ ಇಂಡೀಸ್ ನಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಗಳು ಸದ್ಯ ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ ಭೂ ಕಂಪನದ ಅನುಭವವಾಗಿದ್ದು, ಆಟಗಾರರ ಆತಂಕಕ್ಕೆ ಕಾರಣವಾಗಿದೆ.
ಸದ್ಯ ಭೂಮಿ ಕಂಪಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಭೂ ಕಂಪನದ ಅನುಭವವಾಗಿದೆ. ಆದರೆ, ಇದು ಮೈದಾನದಲ್ಲಿದ್ದ ಆಟಗಾರರಿಗೆ ಅನುಭವವಾಗಿಲ್ಲ. ಕ್ಯಾಮರಾ ಸೇರಿದಂತೆ ಕ್ರೀಡಾಂಗಣದಲ್ಲಿದ್ದ ಹಲವು ವಸ್ತುಗಳು ಕಂಪಿಸಿವೆ.
ಆಟಕ್ಕೆ ಮಾತ್ರ ಯಾವುದೇ ತೊಂದರೆಯಾಗಿಲ್ಲ. ಪಂದ್ಯದ 6ನೇ ಓವರ್ ನ್ನು ಎಸೆಯುತ್ತಿದ್ದಾಗ ಈ ಅನುಭವವಾಗಿದೆ. ಸಮಾರು 15 ರಂದ 20 ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ.
ಸ್ಪೇನ್ ನ ಕರಾವಳಿಯಲ್ಲಿ 5.2ರಷ್ಟು ತೀವ್ರತೆಯ ಕಂಪನದ ಅನುಭವವಾಗಿದೆ. ಮೈದಾನದಲ್ಲಿದ್ದ ಆಟಗಾರರಿಗೆ ಮಾತ್ರ ಯಾವುದೇ ಅನುಭವವಾಗದ ಕಾರಣ ಅವರು ಯಥಾಪ್ರಕಾರ ಆಟವಾಡಿದ್ದಾರೆ.