alex Certify BIG NEWS: ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಾಧನೆ ಬರೆಯಲು ಮುಂದಾದ ಜೂಲನ್​ ಗೋಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಾಧನೆ ಬರೆಯಲು ಮುಂದಾದ ಜೂಲನ್​ ಗೋಸ್ವಾಮಿ

ನಾಳೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್​​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿರುವ ಟೀಂ ಇಂಡಿಯಾದ ಹಿರಿಯ ವೇಗಿ ಜೂಲನ್​ ಗೋಸ್ವಾಮಿ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ.

ವಿಶ್ವ ಕಪ್‌ ಕ್ರಿಕೆಟ್‌ ನಲ್ಲಿ ಪ್ರಸ್ತುತ 38 ವಿಕೆಟ್​ಗಳನ್ನು ಕಬಳಿಸಿರುವ ಗೋಸ್ವಾಮಿಗೆ ವಿಶ್ವಕಪ್​ನಲ್ಲೇ ಅತಿ ಹೆಚ್ಚು ವಿಕೆಟ್​ ಕಬಳಿಸಿದ ಆಟಗಾರ್ತಿ ಎನಿಸಿಕೊಳ್ಳಲು ಒಂದು ವಿಕೆಟ್​ ಅಗತ್ಯವಿದೆ. ಇನ್ನೊಂದು ವಿಕೆಟ್‌ ಪಡೆದರೆ 39 ವಿಕೆಟ್‌ ಪಡೆದ ದಾಖಲೆ ಹೊಂದಿರುವ ಆಸ್ಟ್ರೇಲಿಯಾದ Lyn Fullston ಅವರ ಸಾಧನೆಯನ್ನು ಜೂಲನ್​ ಗೋಸ್ವಾಮಿ ಸರಿಗಟ್ಟಲಿದ್ದಾರೆ.

39 ವರ್ಷದ ಜೂಲನ್​ ಗೋಸ್ವಾಮಿ ತಮ್ಮ 2 ದಶಕಗಳ ಕ್ರಿಕೆಟ್​ ಜೀವನದಲ್ಲಿ 247 ವಿಕೆಟ್​ಗಳನ್ನು ಸಂಪಾದಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 196 ವಿಕೆಟ್​ಗಳನ್ನು ಸಂಪಾದಿಸಿರುವ ಗೋಸ್ವಾಮಿ 250 ವಿಕೆಟ್​ ಮಾರ್ಕ್​ನ್ನು ಪೂರ್ಣಗೊಳಿಸಲು ಮೂರು ವಿಕೆಟ್​ಗಳ ಅಗತ್ಯವಿದೆ.

ಮಾರ್ಚ್ 6ರಂದು ನಡೆದಿದ್ದ ಆರಂಭಿಕ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವಲ್ಲಿ ಗೋಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ನನಗೆ ಈ ದಾಖಲೆಯ ಬಗ್ಗೆ ಮಾಹಿತಿಯೇ ಇರಲಿಲ್ಲ. ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಬೇಕು ಎಂಬುದು ಮಾತ್ರ ನನ್ನ ತಲೆಯಲ್ಲಿದೆ. ತಂಡದ ಯಶಸ್ಸಿಗೆ ಕೊಡುಗೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಜೂಲನ್​ ಗೋಸ್ವಾಮಿ ಹೇಳಿದ್ದಾರೆ.

Let's relive the highlights of the match 🎥 🔽

— BCCI Women (@BCCIWomen) March 7, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...