ಚಿತ್ರರಂಗದವರಂತೆ ಕ್ರಿಕೆಟಿಗರ ಬದುಕು ಕೂಡ ಬಹಳ ಕುತೂಹಲಕಾರಿಯಾಗಿರುತ್ತದೆ. ಲವ್ ಮ್ಯಾರೇಜ್, ಬ್ರೇಕಪ್, ವಿಚ್ಛೇದನ, ಮದುವೆಗೂ ಮುನ್ನವೇ ತಂದೆಯಾಗುವುದು ಹೀಗೆ ಅನೇಕ ಏರಿಳಿತಗಳಿಗೆ ಕ್ರಿಕೆಟಿಗರ ಬದುಕು ಸಾಕ್ಷಿಯಾಗಿದೆ. ಮದುವೆಗೆ ಮುಂಚೆಯೇ ತಂದೆಯಾದ ಕ್ರಿಕೆಟಿಗರು ಯಾರ್ಯಾರು ಅನ್ನೋದನ್ನು ನೋಡೋಣ.
ವಿನೋದ್ ಕಾಂಬ್ಳಿ : ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ತಮ್ಮ ಮೊದಲ ಪತ್ನಿ ನೊಯೆಲಾ ಲೂಯಿಸ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇದಾದ ಬಳಿಕ ಮಾಡೆಲ್ ಆಂಡ್ರಿಯಾ ಹೆವಿಟ್ ಜೊತೆ ಕಾಂಬ್ಳಿ ಡೇಟಿಂಗ್ ಮಾಡುತ್ತಿದ್ದರು. ಈ ವೇಳೆ ಕಾಂಬ್ಳಿ ಹಾಗೂ ಆಂಡ್ರಿಯಾಗೆ ಮಗನೂ ಜನಿಸಿದ್ದಾನೆ. ನಂತರ ಕಾಂಬ್ಳಿ ಆಕೆಯನ್ನು ಮದುವೆಯಾದರು.
ಡೇವಿಡ್ ವಾರ್ನರ್ : ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 2015ರಲ್ಲಿ ತಮ್ಮ ಗೆಳತಿ ಕ್ಯಾಂಡಿಸ್ ವಾರ್ನರ್ ಅವರನ್ನು ವಿವಾಹವಾದರು. ಆದರೆ ಮದುವೆಗೂ ಮುನ್ನವೇ ಅಂದರೆ 2014ರಲ್ಲಿ ದಂಪತಿ ಹೆಣ್ಣು ಮಗುವನ್ನು ಪಡೆದಿದ್ದಾರೆ.
ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. ಗೇಲ್ ತಮ್ಮ ಗೆಳತಿ ನತಾಶಾ ಜೊತೆ ಮದುವೆಗೆ ಮುಂಚೆಯೇ ತಂದೆಯಾಗಿದ್ದರು. ಇಬ್ಬರ ಮದುವೆಗೂ ಮುನ್ನವೇ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಕೇನ್ ವಿಲಿಯಮ್ಸನ್: ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮತ್ತು ಅವರ ಪತ್ನಿ ಸಾರಾ ರಹೀಮ್ ಕೂಡ ಮದುವೆಗೂ ಮೊದಲು ಪೋಷಕರಾದರು. ನಂತರ ಇಬ್ಬರೂ ವಿವಾಹವಾಗಿದ್ದಾರೆ. ಕಳೆದ ವರ್ಷ ಅವರು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.
ಜೋ ರೂಟ್: ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಕೂಡ ಮದುವೆಗೆ ಮುನ್ನ ತಂದೆಯಾಗಿದ್ದಾರೆ. ಜೋ ರೂಟ್ ಅವರ ಗೆಳತಿ ಕೆರ್ರಿ ಕಾಟ್ರೆಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೂಟ್, ಕಾಟ್ರೆಲ್ ಅವರನ್ನು ಇನ್ನೂ ಮದುವೆಯಾಗಿಲ್ಲ.
ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಮದುವೆಗೂ ಮೊದಲೇ ತಂದೆಯಾಗಿದ್ದಾರೆ. ಹಾರ್ದಿಕ್ ಹಾಗೂ ನತಾಶಾ ದಂಪತಿಗೆ ಗಂಡು ಮಗುವಾಗಿತ್ತು. ಇತ್ತೀಚೆಗಷ್ಟೆ ಹಾರ್ದಿಕ್, ನತಾಶಾ ಜೊತೆಗೆ ಹಸೆಮಣೆ ಏರಿದ್ದಾರೆ.