ಬಾಡಿ ಲಾಂಗ್ವೇಜ್ ಮತ್ತು ಸ್ಟೈಲಿಂಗ್ ವಿಷಯಕ್ಕೆ ಬಂದಾಗ, ಕ್ರಾಸ್ ಲೆಗ್ನೊಂದಿಗೆ ಕುಳಿತುಕೊಳ್ಳುವುದು ಆತ್ಮವಿಶ್ವಾಸದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕರಿಗೆ ಕ್ರಾಸ್ ಲೆಗ್ ಅಭ್ಯಾಸವಾಗಿರುವ ಕಾರಣ ಅವ್ರು ಸಾಮಾನ್ಯವಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಕುಳಿತುಕೊಳ್ಳುವಾಗ ಹಿತವೆನಿಸುವ ಕ್ರಾಸ್ ಲೆಗ್ ನಿಂದ ದೇಹಕ್ಕೆ ಅನೇಕ ಹಾನಿಯುಂಟಾಗುತ್ತದೆ.
ಆರೋಗ್ಯ ತಜ್ಞರು ಹೇಳುವಂತೆ ಒಂದು ಕಾಲಿನ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ರಕ್ತದೊತ್ತಡ ಮತ್ತು ಉಬ್ಬಿರುವ ರಕ್ತನಾಳಗಳಂತಹ ಸಮಸ್ಯೆಗಳು ಉಂಟಾಗಬಹುದು. ಅನೇಕ ಆರೋಗ್ಯ ಅಧ್ಯಯನಗಳಲ್ಲಿ ಒಂದು ಪಾದದ ಮೇಲೆ ಕುಳಿತುಕೊಳ್ಳುವುದರಿಂದ ಆಗುವ ನಷ್ಟಗಳ ಬಗ್ಗೆ ಹೇಳಲಾಗದೆ. ಒಂದು ಕಾಲಿನ ಮೇಲೆ ಕುಳಿತುಕೊಳ್ಳುವುದ್ರಿಂದ ನರಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ಬಿಪಿ ರೋಗಿಗಳು ಈ ರೀತಿ ಕುಳಿತುಕೊಳ್ಳಬಾರದು.
ವಾಕಿಂಗ್, ವ್ಯಾಯಾಮ ಸೇರಿದಂತೆ ಯಾವುದೇ ಕಸರತ್ತು ಮಾಡಿದ್ರೂ ಕೀಲು ನೋವು ಕಡಿಮೆಯಾಗುವುದಿಲ್ಲ. ಕಚೇರಿಯಲ್ಲಿ 8ರಿಂದ 9 ಗಂಟೆ ಕ್ರಾಸ್ ಲೆಗ್ ನಲ್ಲಿ ಕುಳಿತುಕೊಳ್ಳುವುದು ಇದಕ್ಕೆ ಕಾರಣ. ಕ್ರಾಸ್ ಲೆಗ್ ಹವ್ಯಾಸ ಬಿಟ್ಟಲ್ಲಿ ಕೀಲು ನೋವು ಕಡಿಮೆಯಾಗುತ್ತದೆ. ಪ್ರತಿದಿನ ಅನೇಕ ಗಂಟೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವ ಬದಲು ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಳ್ಳಿ. ಭಂಗಿ ಬದಲಿಸುತ್ತಿರಿ. ಕ್ರಾಸ್ ಲೆಗ್ ಬಿಡಲು ಸಾಧ್ಯವಿಲ್ಲ ಎನ್ನುವವರು ಕಾಲನ್ನು ಬದಲಿಸುತ್ತಿರಿ.