ಕ್ಯೂಟ್ ಕ್ಯಾಟ್ ಮಾಡಿರುವ ಸ್ಮಾರ್ಟ್ ಕೆಲಸ ನೋಡಿ ದಂಗಾದ ನೆಟ್ಟಿಗರು 08-07-2022 11:43AM IST / No Comments / Posted In: Latest News, Live News, International ಮಾರ್ಜಾಲ ಅಂದ್ರೆ ಬೆಕ್ಕುಗಳು ನೋಡೋದಕ್ಕೆ ಶಾಂತವಾಗಿರೋ ಹಾಗೆ ಕಂಡರೂ, ಅವು ಚಾಣಾಕ್ಷ ಬುದ್ಧಿ ಹೊಂದಿರುವ ಪ್ರಾಣಿ. ಆದರೆ ಕೆಲವರು ಬೆಕ್ಕುಗಳು ಅಂದ್ರೆ ಸಾಕು ಅಪಶಕುನ ಅಂತ ಅದರಿಂದ ದೂರ ಇರ್ತಾರೆ. ಆದರೆ ಇವೇ ಬೆಕ್ಕುಗಳು ಕೆಲವು ಸಂದರ್ಭದಲ್ಲಿ ಮನುಷ್ಯರಿಗೆ ಹೇಗೆಲ್ಲ ಸಹಾಯ ಮಾಡುತ್ತೆ ಅನ್ನುವಂತಹ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದೊಂದು ಪುಟ್ಟ ರಂಧ್ರ, ಅದರೊಳಗೆ ಬೀಗದ ಕೈ ಬಿದ್ದಿರುತ್ತೆ. ಅದು ಆ ಬೆಕ್ಕಿನ ಮಾಲೀಕಳದ್ದು. ಆಕೆಯ ಮಗು ಆಟ ಆಡುತ್ತ, ಆ ಪುಟಾಣಿ ಬೀಗದ ಕೈಯನ್ನ ಆ ರಂಧ್ರದ ಒಳಗೆ ಹಾಕಿರುತ್ತೆ. ಆ ಬೀಗದ ಕೈಯನ್ನ ಹೊರಗೆ ತೆಗೆಯೊದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಅದು ಅದು ಸಾಧ್ಯವಾಗಿರಲಿಲ್ಲ. ಆಗ ಬೆಕ್ಕು ತನ್ನ ಒಡತಿಯ ಕಷ್ಟ ನೋಡುವುದಕ್ಕಾಗದೇ ತಾನೇ ಕಷ್ಟಪಟ್ಟು ಆ ಬೀಗದ ಕೈಯನ್ನ ಹೊರಗೆ ತೆಗೆದುಕೊಡುತ್ತೆ. ಸೋಶಿಯಲ್ ಮೀಡಿಯಾ ಸೈಟ್ ಆಗಿರುವ ರೆಡ್ ಇಟ್ನಲ್ಲಿ ಈ ವಿಡಿಯೋವನ್ನ ಅಪ್ಲೋಡ್ ಮಾಡಲಾಗಿದೆ. ಅನೇಕರು ಬೆಕ್ಕಿನ ಟ್ಯಾಲೆಂಟ್ ನೋಡಿ ಶಹಬ್ಬಾಷ್ ಅಂತ ಹೇಳಿದ್ದಾರೆ. ಈಗಾಗಲೇ ಈ ವಿಡಿಯೋವನ್ನ 20 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಅಲ್ಲದೇ ಬೆಕ್ಕು ಕಷ್ಟಪಟ್ಟು ಕೀ ಹೊರಗೆ ತೆಗೆದಿರುವುದಕ್ಕೆ ಬೆಕ್ಕಿಗೆ ಬಹುಮಾನ ಕೊಡಬೇಕು ಅಂತ ಕಾಮೆಂಟ್ ಹಾಕಿದ್ದಾರೆ. ಬೆಕ್ಕು ಅಂತ ಮೂಗು ಮುರಿಯೋರು, ಬೆಕ್ಕಿನ ಈ ವಿಡಿಯೋ ನೋಡಿ ವಾವ್ಹ್ ಅಂತ ಹೇಳಿದ್ದಂತೂ ಸುಳ್ಳಲ್ಲ..! Kid drops mom’s keys in a hole, kitty comes to the rescue. byu/Nightstar95 inAnimalsBeingBros