ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ನಮಗೆಲ್ಲಾ ಗೊತ್ತು. ನಿತ್ಯ ಕ್ಯಾರೆಟ್ ತಿನ್ನುತ್ತಿದ್ದರೆ ಇನ್ನೂ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಅವು ಯಾವುವು ನೋಡೋಣ.
ತೂಕ ಇಳಿಕೆಗೆ
ತೂಕ ಕಳೆದುಕೊಳ್ಳಲು ಬಯಸುವವರು ಕ್ಯಾರೆಟ್ ಸೇವನೆ ಮಾಡಬೇಕು. ಇದರಲ್ಲಿ ಫೈಬರ್ ಅಂಶ ಹೆಚ್ಚಿದೆ. ಇದು ನಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಜೀರ್ಣಕ್ರಿಯೆಗೆ
ಮೊದಲೇ ಹೇಳಿದಂತೆ ಇದರಲ್ಲಿ ಜೀರ್ಣಕ್ರಿಯೆಗೆ ಅಗತ್ಯವಾದ ಅಂಶವಿದೆ. ಹೀಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಹೃದಯ ಆರೋಗ್ಯ
ಕ್ಯಾರೆಟ್ ಸೇವನೆಯಿಂದ ಹೃದಯದ ರಕ್ತನಾಳಗಳ ದ್ವಾರದಲ್ಲಿ ಬೇಡದ ಕೊಬ್ಬು ಸಂಗ್ರಹವಾಗುವುದನ್ನು ತಡೆಗಟ್ಟಬಹುದು. ಕೊಬ್ಬಿನಂಶ ನಿಯಂತ್ರಿಸುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ರೋಗ ನಿರೋಧಕ ಶಕ್ತಿ
ಕ್ಯಾರೆಟ್ ನಲ್ಲಿ ಪೋಷಕಾಂಶಗಳು, ಆಂಟಿ ಆಕ್ಸಿಡೆಂಟ್, ಖನಿಜಾಂಶಗಳು ಸಾಕಷ್ಟಿದ್ದು ಉತ್ತಮ ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.