ಬರೀ ಹಸಿ ಮೆಣಸಿನ ಕಾಯಿ, ಶೇಂಗಾ, ಕೊಬ್ಬರಿ ಚಟ್ನಿ ತಿಂದು ಬೇಜಾರ್ ಆಗಿದ್ದೀರಾ. ಹಾಗಿದ್ದರೆ ಕ್ಯಾರೆಟ್ ಬಳಸಿ ಚಟ್ನಿಯನ್ನು ಮಾಡಿ ಸವಿಯಿರಿ.
ರುಚಿಯಲ್ಲಿ ಕೊಂಚ ಭಿನ್ನವೆನಿಸಿದರು, ತಿನ್ನಲು ಇಷ್ಟವಾಗುತ್ತದೆ. ಇಲ್ಲಿದೆ ಕ್ಯಾರೆಟ್ ಚಟ್ನಿ ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಕ್ಯಾರೆಟ್ ತುರಿ – 1 ಕಪ್
ತೆಂಗಿನ ತುರಿ – 1/2 ಕಪ್
ಕಡಲೇ ಬೇಳೆ – 1 ಟೀ ಚಮಚ
ಒಣ ಮೆಣಸಿನಕಾಯಿ – 2-3
ಹುಣಸೆಹಣ್ಣು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕದೆ ಕಡಲೆಬೇಳೆ, ಒಣ ಮೆಣಸಿನ ಕಾಯಿ, ಹುಣಸೆಹಣ್ಣು ಎಲ್ಲವನ್ನೂ ಒಟ್ಟಿಗೆ ಹಾಕಿ ಕಡಲೆಬೇಳೆ ಕೆಂಪು ಬಣ್ಣ ಬರುವವರೆಗೆ ಹುರಿದು ಕೊಳ್ಳಬೇಕು. ಈ ಮಿಶ್ರಣಕ್ಕೆ ಕ್ಯಾರೆಟ್ ತುರಿ, ತೆಂಗಿನ ತುರಿ ಮತ್ತು ಉಪ್ಪನ್ನು ಸೇರಿಸಿ. ನಂತರ ನುಣ್ಣಗೆ ರುಬ್ಬಿ. ಬೇಕಿದ್ದರೆ ಸಾಸಿವೆ ಮತ್ತು ಇಂಗಿನ ಒಗ್ಗರಣೆ ನೀಡಿ. ಊಟದ ಜೊತೆ ಅಥವಾ ತಿಂಡಿಯ ಜೊತೆ ಈ ಚಟ್ನಿಯನ್ನು ಸವಿಯಬಹುದು.