ಕ್ಯಾನ್ಸರ್ ಮಹಾಮಾರಿ ಭಾರತದಲ್ಲಿ ಸಂಭವಿಸ್ತಾ ಇರೋ ಸಾವಿಗೆ ಎರಡನೇ ಅತಿ ದೊಡ್ಡ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2020ರಿಂದೀಚೆಗೆ ಭಾರತದಲ್ಲಿ 8 ಲಕ್ಷ ಜನರು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 2040ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು ಶೇ.60ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಚಟುವಟಿಕೆಯುಳ್ಳ ಜೀವನ ಶೈಲಿ, ಆರೋಗ್ಯಕರ ಆಹಾರ, ವ್ಯಸನಗಳಿಂದ ದೂರವಿದ್ದರೆ ಕ್ಯಾನ್ಸರ್ ನಿಂದಲೂ ಪಾರಾಗಬಹುದು. ಹಸಿ ತರಕಾರಿ, ಹಣ್ಣುಗಳು, ಬೇರು ಮತ್ತು ಗೆಡ್ಡೆಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಪೋಷಿಸುತ್ತವೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ದೂರ ಮಾಡುತ್ತವೆ.
ಆದ್ರೆ ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಸಕ್ಕರೆ, ಮೈದಾ, ಎಣ್ಣೆ, ರೆಡಿ ಟು ಈಟ್ ಫುಡ್, ಮಾಂಸ, ಡೈರಿ ಉತ್ಪನ್ನಗಳು ಮತ್ತು ಕೊಬ್ಬಿನ ಪದಾರ್ಥಗಳು ನಿಮಗೆ ಮಾರಕವಾಗಬಹುದು. ನಾವು ಯಾವ ರೀತಿ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಕ್ಯಾನ್ಸರ್ ಬೆಳವಣಿಗೆಯ ಅಪಾಯದ ಮೇಲೆ ಪ್ರಭಾವ ಬೀರುತ್ತದೆ.
ಡೈರಿ ಉತ್ಪನ್ನಗಳು, ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಡ್, ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಗೆ ಕಾರಣವಾಗಬಹುದು. ಕ್ಯಾನ್ಸರ್ ಗೂ ಇದಕ್ಕೂ ನೇರ ಸಂಬಂಧವಿದೆ. ಉಪ್ಪಿನಕಾಯಿ, ಸಂಸ್ಕರಿಸಿದ ಮಾಂಸ, ಸಂಸ್ಕರಿಸಿದ ಹಿಟ್ಟು, ತಳೀಯವಾಗಿ ಮಾರ್ಪಡಿಸಿದ ಆಹಾರ, ಹೈಡ್ರೋಜನೀಕರಿಸಿದ ಎಣ್ಣೆ, ಮೈಕ್ರೋವೇವ್ ನಲ್ಲಿ ಮಾಡಿದ ಪಾಪ್‌ಕಾರ್ನ್, ಆಲೂಗಡ್ಡೆ ಚಿಪ್ಸ್ ಮತ್ತು ನೈಟ್ರೈಡ್ ಹೊಂದಿರುವ ಆಹಾರಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ.
ಅರಿಶಿನ, ಪಾಲಕ್ ಸೊಪ್ಪು, ಕೋಸುಗಡ್ಡೆ, ಶುಂಠಿ, ಗ್ರೀನ್ ಟೀ, ಬೆಳ್ಳುಳ್ಳಿ, ಕೆಂಪು ಎಲೆಕೋಸು, ಬೆರಿ ಹಣ್ಣುಗಳು, ದಾಳಿಂಬೆ, ಕಿತ್ತಳೆ, ಮಲ್ಬೆರಿ ಮತ್ತು ಫೈಬರ್ ಭರಿತ ಆಹಾರಗಳು ಕ್ಯಾನ್ಸರ್ ಅನ್ನು ದೂರ ಮಾಡಬಲ್ಲವು. ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸಿ. ಕೃತಕ ಬಣ್ಣ ಹೊಂದಿರುವ ಆಹಾರಗಳು, ಪ್ರಿಸರ್ವೇಟಿವ್ ಬಳಸಿರೋ ಪದಾರ್ಥಗಳು, ಸಂಸ್ಕರಿತ ಮತ್ತು ವಿಘಟಿತ ಆಹಾರಗಳು ಕ್ಯಾನ್ಸರ್ ಅನ್ನು ಉತ್ತೇಜಿಸುತ್ತವೆ.