ವಿಶ್ವದ ಅತಿದೊಡ್ಡ ಸಂಪತ್ತು ನಮ್ಮ ಆರೋಗ್ಯ. ಆದರೆ ಪ್ರಸ್ತುತ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಸ್ಥೂಲಕಾಯತೆ ಕೂಡ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಆಹಾರ. ನಾವೀಗ ಸೇವಿಸುತ್ತಿರುವ ಆಹಾರವು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ನೀವು ಯಾವ ಪಾತ್ರೆಯಲ್ಲಿ ಆಹಾರವನ್ನು ಸೇವಿಸುತ್ತೀರಿ ಎಂಬುದು ಕೂಡ ಮುಖ್ಯವಾಗಿದೆ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಪಾತ್ರೆಗಳು ಬರುತ್ತಿವೆ. ಆದರೆ ಕೆಲವರು ಪ್ಲಾಸ್ಟಿಕ್ ಪಾತ್ರೆಗಳು, ತಟ್ಟೆ, ಪ್ಲೇಟ್‌ಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಪಾತ್ರೆಗಳು ದಿನದಿಂದ ದಿನಕ್ಕೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿವೆ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತದೆ. ಕೆಲವರು ಊಟ, ತಿಂಡಿ ಸೇವನೆಗೆ ಸ್ಟೀಲ್, ಕಬ್ಬಿಣ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಅತ್ಯಂತ ಅಪಾಯಕಾರಿ.
ನಾವು ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಮಾಡಿದಾಗ ಅಥವಾ ಬಿಸಿ ಬಿಸಿ ತಿನಿಸುಗಳನ್ನು ಅವುಗಳಲ್ಲಿ ಹಾಕಿದಾಗ ಎಂಡೋಕ್ರೈನ್ ಡಿಸ್ಟ್ರೋಯಿಂಗ್ ಎಂಬ ಅಪಾಯಕಾರಿ ರಾಸಾಯನಿಕವು ನಮ್ಮ ಆಹಾರದಲ್ಲಿ ಬೆರೆತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್‌ನಲ್ಲಿ ಬಿಸಿ ಮಾಡಿದ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹದ ಹಾರ್ಮೋನ್ ಸಮತೋಲನವು ಹಾಳಾಗುತ್ತದೆ. ಈ ಕಾರಣದಿಂದಾಗಿ ದೇಹವು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಆಹಾರವನ್ನು ಮೈಕ್ರೋವೇವ್‌ನಲ್ಲಿ ದೀರ್ಘಕಾಲ ಬಿಸಿ ಮಾಡಬಾರದು ಅನ್ನೋದು ಆರೋಗ್ಯ ತಜ್ಞರ ಸಲಹೆ.
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಬಿಸಿ ಮಾಡುವುದರಿಂದ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ಇದರೊಂದಿಗೆ ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲಿಯ ಬದಲು ಲೋಹ ಅಥವಾ ಗಾಜಿನ ಬಾಟಲಿಯನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿ. ಬಿಸಿ ನೀರನ್ನು ಅಪ್ಪಿತಪ್ಪಿಯೂ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಬಾರದು. ಚಿಕ್ಕ ಮಕ್ಕಳಿಗೆ ಕೂಡ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕೊಡಬೇಡಿ, ಅದರ ಬದಲು ಸ್ಟೀಲ್ ಬಳಸಿ.