
ಕ್ಯಾನ್ಸರ್ ಅದೆಂಥಾ ಖಾಯಿಲೆ ಎಂದರೆ ಇದರ ಹೆಸರು ಕೇಳಿದ ತಕ್ಷಣ ಜನರ ಮೈ ಕಂಪಿಸುತ್ತದೆ. ವಿವಿಧ ರೀತಿಯ ಕ್ಯಾನ್ಸರ್‌ಗಳಿದ್ದು, ಬೇರೆ ಬೇರೆ ತೆರನಾದ ರೋಗಲಕ್ಷಣಗಳು ಮತ್ತು ಅಪಾಯಗಳನ್ನು ಹೊಂದಿವೆ. ಕ್ಯಾನ್ಸರ್ ಬರದಂತೆ ತಡೆಯಲು ನಾವು ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಕೆಲವು ನಿರ್ದಿಷ್ಟ ವಸ್ತುಗಳ ಸೇವನೆ ಮೂಲಕ ನಾವು ಕ್ಯಾನ್ಸರ್ ವಿರುದ್ಧ ಹೋರಾಡಬಹುದು.
ಕ್ಯಾನ್ಸರ್ ತಪ್ಪಿಸುವುದು ಹೇಗೆ?
ಫೈಟೊನ್ಯೂಟ್ರಿಯೆಂಟ್‌ಗಳು ಅನೇಕ ಹಣ್ಣುಗಳು, ಬ್ರೊಕೊಲಿ, ಟೊಮ್ಯಾಟೊ ಮತ್ತು ಈರುಳ್ಳಿಯಂತಹ ತರಕಾರಿಗಳಲ್ಲಿ ಕಂಡುಬರುತ್ತವೆ.
ಅವು ಶಿಲೀಂಧ್ರ, ಬ್ಯಾಕ್ಟೀರಿಯಾದಂತಹ ಇತರ ಅಪಾಯಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಅಷ್ಟೇ ಅಲ್ಲ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದಲೂ ದೇಹಕ್ಕೆ ರಕ್ಷಣೆ ನೀಡುತ್ತವೆ. ನಿಯಮಿತವಾಗಿ ಕೆಲವು ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ಅರಿಶಿನ: ನಾವೆಲ್ಲರೂ ಪ್ರತಿದಿನ ಅಡುಗೆಗೆ ಅರಿಶಿನವನ್ನು ಬಳಸುತ್ತೇವೆ. ಕರ್ಕ್ಯುಮಿನ್ ಎಂಬ ವಸ್ತುವು ಅರಿಶಿನದಲ್ಲಿರುತ್ತದೆ. ಇದು ಶ್ವಾಸಕೋಶ, ಸ್ತನ, ಜಠರಗರುಳಿನ ಕ್ಯಾನ್ಸರ್ ಮತ್ತು ಚರ್ಮದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಹಾಗಾಗಿ ನಿಯಮಿತವಾಗಿ ಅರಿಶಿನವನ್ನು ಸೇವನೆ ಮಾಡಿ.
ಟೊಮೇಟೊ: ಟೊಮೆಟೊ ಬಹುತೇಕ ಎಲ್ಲರೂ ಬಳಸುವಂತಹ ತರಕಾರಿ. ಹೃದ್ರೋಗಗಳು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಟೊಮೆಟೋ, ಲೈಕೋಪೀನ್ ಎಂಬ ಪ್ರಬಲವಾದ ಉತ್ಕರ್ಷಣ ನಿರೋಧಕ ಫೈಟೊಕೆಮಿಕಲ್ ಅನ್ನು ಹೊಂದಿರುತ್ತದೆ. ಲೈಕೋಪೀನ್ ಹೊಂದಿರುವ ಆಹಾರ ಪದಾರ್ಥಗಳು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.
ವಾಲ್‌ನಟ್ಸ್: ಇದು ಅತ್ಯಂತ ಆರೋಗ್ಯಕರ ಡ್ರೈಫ್ರೂಟ್. ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಟೋಕೋಫೆರಾಲ್‌ಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಂತಹ ಜೈವಿಕ ಸಕ್ರಿಯ ಪದಾರ್ಥಗಳನ್ನು ಹೊಂದಿರುವ ವಾಲ್‌ನಟ್‌ಗಳು, ಗಡ್ಡೆಗಳ ರಚನೆಯನ್ನು ತಡೆಯುತ್ತವೆ. ಇದರಲ್ಲಿರುವ ಫೈಟೊಸ್ಟೆರಾಲ್ ಮತ್ತು ವಿಟಮಿನ್-ಇ ಕೂಡ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸ್ತನ ಕ್ಯಾನ್ಸರ್ ಕೋಶಗಳ ಈಸ್ಟ್ರೊಜೆನ್ ಗ್ರಾಹಕಗಳನ್ನು ಫೈಟೊಸ್ಟೆರಾಲ್‌ಗಳ ಮೂಲಕ ತಡೆಯಬಹುದು.
ಬ್ರೊಕೊಲಿ: ಇದು ಕೊಲೊನ್, ಮೂತ್ರಕೋಶ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಉತ್ತಮ ತರಕಾರಿಯಾಗಿದೆ. ಈ ಫೈಬರ್ ಭರಿತ ತರಕಾರಿಯು ಬಹಳಷ್ಟು ಸಲ್ಫೊರಾಫೇನ್ ಅನ್ನು ಹೊಂದಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳನ್ನು ಕೊಲ್ಲುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಗೆ ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಇದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ನೈಸರ್ಗಿಕ ಮದ್ದು. ಜೀವಕೋಶಗಳು, ಮ್ಯಾಕ್ರೋಫೇಜ್‌ಗಳನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಬೆಳ್ಳುಳ್ಳಿ ಬ್ರೇಕ್ ಹಾಕುತ್ತದೆ. ನೀವು ಅದನ್ನು ಉಪ್ಪಿನಕಾಯಿ ರೂಪದಲ್ಲಿ ಅಥವಾ ಹಸಿಯಾಗಿ ಕೂಡ ತಿನ್ನಬಹುದು.
ಬೀನ್ಸ್: ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯದಿಂದ ರಕ್ಷಿಸಲು ಸಹಾಯ ಮಾಡುವ ಫೀನಾಲಿಕ್ ಆಮ್ಲ ಬೀನ್ಸ್‌ನಲ್ಲಿದೆ. ಆಂಥೋಸಯಾನಿನ್ ನಂತಹ ಕ್ಯಾನ್ಸರ್-ತಡೆಗಟ್ಟುವ ಪದಾರ್ಥಗಳನ್ನು ಇದು ಒಳಗೊಂಡಿದೆ. ಹಾಗಾಗಿ ಬೀನ್ಸ್ ಅನ್ನು ಕೂಡ ನಿಯಮಿತವಾಗಿ ಸೇವನೆ ಮಾಡಿ.