ಗೋವಾದ ಸ್ಥಳೀಯ ಮದ್ಯವಾದ ಫೆನಿಯ ಇತಿಹಾಸವಿರುವ ಅಪರೂಪದ ಮ್ಯೂಸಿಯಂಗೆ ಕ್ಯಾಂಡೊಲಿಮ್‍ನಲ್ಲಿ ಚಾಲನೆ ಸಿಕ್ಕಿದೆ. ಸ್ಥಳೀಯ ಉದ್ಯಮಿ ನಂದನ್ ಕುಡ್‍ಛಾಡ್ಕರ್ ಇದನ್ನು ತೆರೆದಿದ್ದಾರೆ.
ಗೋಡಂಬಿ ಹಣ್ಣಿನ ಆಧರಿತವಾದ ಫೆನಿ ಮದ್ಯವು ಗೋವಾದಲ್ಲಿ ಬಹಳ ವಿಶೇಷ. ಇದು ಬ್ರೆಜಿಲ್‍ನಿಂದ ಗೋವಾಗೆ ಪೋರ್ಚುಗೀಸರಿಂದ ತರಲಾಗಿತ್ತು. ಸದ್ಯ ಗೋವಾದ ಪರಂಪರೆ, ಸಂಸ್ಕೃತಿಯಲ್ಲಿ ಫೆನಿ ಬೆರೆತುಹೋಗಿದೆ.
ಜಿಯೋಗ್ರಾಫಿಕಲ್ ಟ್ಯಾಗ್ ಪಡೆದ ದೇಶದ ಮೊದಲ ದೇಸೀಯ ಮದ್ಯ ಎಂಬ ಹೆಗ್ಗಳಿಕೆ ಕೂಡ ಗೋಡಂಬಿಯ ಫೆನಿಯದ್ದಾಗಿದೆ. ಇದನ್ನು 2016ರಲ್ಲಿ ಪಾರಂಪರಿಕ ಪೇಯ ಎಂದು ಗೋವಾ ಸರಕಾರ ಕೂಡ ಗುರುತಿಸಿ ಮಾನ್ಯತೆ ನೀಡಿದೆ.
ನೆಟ್ಟಿಗರ ಗಮನ ಸೆಳೆದಿದೆ ಮುಂಬೈ ಪೊಲೀಸ್ ಪೋಸ್ಟ್ ಮಾಡಿದ ವಿಡಿಯೋ
ಸ್ಕಾಚ್ ಮತ್ತು ಟಕಿಲಾ ಮಾದರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ದೇಸೀಯ ಫೆನಿಯನ್ನು ಒಯ್ಯುವ ಮೂಲಕ ತಯಾರಕರಿಗೆ ಉತ್ತಮ ಉದ್ದಿಮೆ ಸ್ಥಾಪಿಸಿಕೊಡುವುದು ಸರಕಾರದ ಉದ್ದೇಶವಾಗಿದೆ.