ನವದೆಹಲಿ: ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ಈವರೆಗೆ 65,481 ಪ್ರಕರಣಗಳಲ್ಲಿ ಮಹಿಳೆಯರು ದೂರು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
ದೆಹಲಿಯು 3564 ಪ್ರಕರಣಗಳನ್ನು ದಾಖಲಿಸಿದೆ.
ರಾಜ್ಯಗಳಿಂದ ಸ್ವೀಕರಿಸಿದ ಡೇಟಾವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟಿ ಅವರು ಜಸ್ಟೀಸ್ ಯು.ಯು. ಲಲಿತ್, ಎಸ್.ಆರ್. ಭಟ್ ಹಾಗೂ ಪಿ.ಎಸ್. ನರಸಿಂಹ ಅವರಿದ್ದ ಪೀಠಕ್ಕೆ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ. ಈ ಡೇಟಾದ ಪ್ರಕಾರ 38,381 ಪ್ರಕರಣಗಳೊಂದಿಗೆ ರಾಜಸ್ಥಾನ ಹಾಗೂ 37,876 ಪ್ರಕರಣಗಳೊಂದಿಗೆ ಆಂಧ್ರ ಪ್ರದೇಶ ರಾಜ್ಯಗಳು ಕೌಟುಂಬಿಕ ಹಿಂಸೆ ಕಾಯ್ದೆ.ಯ ಪ್ರಕರಣಗಳ ಪಟ್ಟಿಯಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಖಾಸಗಿ ಬಸ್ ಭೀಕರ ಅಪಘಾತ; 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಕೇರಳವು ಈವರೆಗೆ 20,926 ಪ್ರಕರಣಗಳನ್ನು ದಾಖಲಿಸಿದೆ,. ಮಧ್ಯಪ್ರದೇಶದಲ್ಲಿ 16,384; ಮಹಾರಾಷ್ಟ್ರದಲ್ಲಿ 16,168; ಆಸ್ಸಾಂನಲ್ಲಿ 12,739; ಕರ್ನಾಟಕದಲ್ಲಿ 11,407; ಪಶ್ಚಿಮ ಬಂಗಾಳದಲ್ಲಿ 9,858; ಪಂಜಾಬ್‌ನಲ್ಲಿ 8,215 ಹಾಗೂ ಹರ್ಯಾಣದಲ್ಲಿ 7,715 ಪ್ರಕರಣಗಳು ವರದಿಯಾಗಿವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಿದ ಮಾಹಿತಿಯನ್ನು ಅವಲೋಕಿಸಿದರೆ, ಒಟ್ಟು 2,95,601 ದೂರುಗಳು ಈ ಕಾಯ್ದೆಯಡಿ ದಾಖಲಾಗಿವೆ, ಒಟ್ಟು 6,289 ನ್ಯಾಯಾಲಯಗಳು ಈ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿವೆ. ಸಂತ್ರಸ್ತರಿಗೆ 807 ಆಶ್ರಯ ನಿಲಯಗಳು ಹಾಗೂ 700ಕ್ಕೂ ಹೆಚ್ಚು ಒನ್-ಸ್ಟಾಪ್ ಕೇಂದ್ರಗಳು ಕಾರ್ಯಾಚರಿಸುತ್ತ, ಕೌಟುಂಬಿಕ ದೌರ್ಜನ್ಯದಿಂದ ಬಾಧಿತರಾದ ಮಹಿಳೆಯರಿಗೆ ನೆರವಾಗುತ್ತಿವೆ ಎಂದು ವಿವರಿಸಿದರು,
ದೂರುದಾರ ಎನ್‌ಜಿಒ ‘ವಿ ದ ವಿಮೆನ್ ಆಫ್ ಇಂಡಿಯಾ’ ಪರವಾಗಿ ಹಾಜರಾದ ವಕೀಲೆ ಶೋಭಾ ಗುಪ್ತಾ ಅವರು, ಮಹಿಳೆಯರಿಗೆ ರಕ್ಷಣೆ ನೀಡುವ ಅಧಿಕಾರಿಗಳ ಕೊರತೆ ಇದೆ. ಮೂಲಸೌಲಭ್ಯದ ಕೊರತೆಯೂ ಚಿಂತಾಜನಕವಾಗಿದೆ ಎಂದಿದ್ದಾರೆ.