ಕೋವಿಡ್-19ಗೆ ಸಂಬಂಧಿಸಿದ ಅಧ್ಯಯನವೊಂದರಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಕೊರೊನಾದಿಂದ ಬಳಲುತ್ತಿರುವವರ ದೇಹದಲ್ಲಿ SARS-CoV-2 ವೈರಸ್‌ನ ಹಲವಾರು ರೂಪಾಂತರಿಗಳಿರಬಹುದು ಅಂತಾ ತಜ್ಞರು ಹೇಳಿದ್ದಾರೆ.
ಎರಡು ಅಧ್ಯಯನಗಳ ಸಂಶೋಧನೆಯ ಪ್ರಕಾರ, ಈ ರೂಪಾಂತರಿಗಳು ದೇಹದ ವಿವಿಧ ಭಾಗಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯಿಂದ ಮರೆಯಾಗಿರುತ್ತವೆ ಅಂತಾ ಹೇಳಲಾಗ್ತಿದೆ.
ಬ್ರಿಟನ್ ನ ಬ್ರಿಸ್ಟಲ್ ವಿಶ್ವವಿದ್ಯಾನಿಲಯ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್‌ನ ಸಂಶೋಧಕರ ನೇತೃತ್ವದ ಅಂತರರಾಷ್ಟ್ರೀಯ ತಂಡವು ಈ ತೀರ್ಮಾನಕ್ಕೆ ಬಂದಿದೆ. ಸೋಂಕಿತ ವ್ಯಕ್ತಿಯ ದೇಹದಿಂದ ವೈರಸ್ ಅನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಕಷ್ಟಕರವೆಂದು ಹೇಳಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನಗಳಲ್ಲಿ ವೈರಸ್ ವಿಭಿನ್ನ ಕೋಶ ಪ್ರಕಾರಗಳಲ್ಲಿ ಹೇಗೆ ವಿಭಿನ್ನವಾಗಿ ವಿಕಸನಗೊಳ್ಳಬಹುದು ಎಂದು ವಿವರಿಸಲಾಗಿದೆ. ಮತ್ತು ಅದರಲ್ಲೇ ಯಾವ ರೀತಿ ಪ್ರತಿರಕ್ಷೆಯನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಹೇಳಲಾಗಿದೆ. ವೈರಸ್ ನ ಇನ್ಫೆಕ್ಷನ್ ಸೈಕಲ್ ನಲ್ಲಿ, SARS-CoV-2 ವೈರಸ್ ಪ್ರೋಟೀನ್ ಅಂಶವನ್ನು ಹೆಚ್ಚಿಸುತ್ತದೆ. ಈ ಮೂಲಕ ದೇಹದ ಸೆಲ್ಸ್ ಗೆ ಎಂಟ್ರಿಕೊಟ್ಟು ಇನ್ಫೆಕ್ಷನ್ ಅನ್ನು ಉಂಟು ಮಾಡುತ್ತದೆ.
ಈಗಾಗ್ಲೇ ವಿಶ್ವದಾದ್ಯಂತ ಒಮಿಕ್ರಾನ್ ಹಾಗೂ ಒಮಿಕ್ರಾನ್ 2 ಕೊರೊನಾದ ಮೂಲ ವೈರಸ್ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಕೆಲವೇ ಕೆಲವು ರೋಗಿಗಳಲ್ಲಿ ಮಾತ್ರ ಬ್ರಿಸ್ ಡೆಲ್ಟಾ ವೈರಸ್ ಕಂಡು ಬಂದಿದೆ. ಒಬ್ಬನೇ ರೋಗಿಯಲ್ಲಿ ಹಲವು ರೂಪಾಂತರಿ ವೈರಸ್ ಗಳಿರಬಹುದು ಅನ್ನೋದು ಆಘಾತಕಾರಿ ಸಂಗತಿ ಅಂತಾ ಖುದ್ದು ವಿಜ್ಞಾನಿಗಳೇ ಹೇಳುತ್ತಿದ್ದಾರೆ.