
ಪ್ರಸಿದ್ಧ ಇಂಗ್ಲೀಷ್ ಚಲನಚಿತ್ರ ‘ಹೋಮ್ ಅಲೋನ್’ನ ಸಣ್ಣ ವಿಡಿಯೋವನ್ನು ಲಸಿಕೆಗೆ ಲಿಂಕ್ ಮಾಡಿದ್ದಾರೆ. ಸಿನಿಮಾದಲ್ಲಿ ಕೆವಿನ್ ಮೆಕ್‌ಕಾಲಿಸ್ಟರ್ ಪಾತ್ರಧಾರಿ ತನ್ನ ಮನೆ ಮತ್ತು ತನ್ನನ್ನು ಇಬ್ಬರು ಕಳ್ಳರಿಂದ ರಕ್ಷಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಪೂನಾವಾಲಾ ಅವರು ಹಂಚಿಕೊಂಡ ಮೆಮೆ ವಿಡಿಯೋದಲ್ಲಿ, ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರ ವೈರಸ್ ಅನ್ನು ಕಳ್ಳರಿಗೆ ಟ್ಯಾಗ್ ಮಾಡಲಾಗಿದೆ. ಡೆಲ್ಟಾ ಹಾಗೂ ಓಮಿಕ್ರಾನ್ ತಾನು ಮುಂದೆ ಅಂತಾ ಕಿತ್ತಾಡುತ್ತಿದ್ದರೆ (ಮೆಮೆ ವಿಡಿಯೋದಲ್ಲಿ), ಲಸಿಕೆ ಎಂದು ಟ್ಯಾಗ್ ಮಾಡಲಾಗಿರುವ ಬಕೆಟ್ ಅದರ ಮೇಲೆ ಬೀಳುತ್ತದೆ. ಈ ವೇಳೆ ಓಮಿಕ್ರಾನ್ ಮೆಟ್ಟಿಲು ಹತ್ತಲು ಮುಂದಾದಾಗ ಬೂಸ್ಟರ್ ಎಂದು ಟ್ಯಾಗ್ ಮಾಡಲಾದ ಬಕೆಟ್ ನಿಂದ ಒದೆ ತಿನ್ನುತ್ತಾನೆ. ಇಬ್ಬರೂ ಕೂಡ ಹೊಡೆತ ತಿಂದು ನಿಲಕ್ಕೆ ಬೀಳುತ್ತಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಪೂನಾವಾಲಾ, ಇಲ್ಲಿ ಏನು ನಡೆಯುತ್ತಿದೆ? ಎಂದು ಶೀರ್ಷಿಕೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ಬೂಸ್ಟರ್ ಶಾಟ್‌ಗಳ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಪೂನಾವಾಲಾರನ್ನು ಶ್ಲಾಘಿಸಿದ್ರೆ, ಇತರರು ಮಾರ್ಕೆಟಿಂಗ್ ತಂತ್ರ ಎಂದು ಟೀಕಿಸಿದ್ದಾರೆ.