
ಕೋವಿಡ್ ಸೋಂಕು ತಗುಲಿದ್ದಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ನಟಿ ಪೋಸ್ಟ್ ಮಾಡಿದ್ದರು. ತಾನು ಪ್ರತ್ಯೇಕವಾಗಿದ್ದು, ಕ್ವಾರಂಟೈನ್ ನಲ್ಲಿರುವುದಾಗಿ ತಿಳಿಸಿದ್ದಾರೆ. ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದು, ಶೀಘ್ರದಲ್ಲೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೂಡಲೇ ಇವರ ಚೇತರಿಕೆಗೆ ಎಲ್ಲರೂ ಹಾರೈಸಿದ್ದಾರೆ. ಆದರೆ, ಇನ್ನೊಂದಷ್ಟು ಮಂದಿ ನಟಿ ಸ್ವರಾ ಭಾಸ್ಕರ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಹೌದು, ಈ ಸಂಬಂಧ ಟ್ವೀಟ್ ಮಾಡಿರುವ ನಟಿ ಸ್ವರಾ ಭಾಸ್ಕರ್, ತನಗೆ ಕೋವಿಡ್ ಪಾಸಿಟಿವ್ ಬಂದಿದ್ದಕ್ಕೆ ಕೆಲವರು ಸಂತೋಷಪಟ್ಟು ಹಂಚಿಕೊಂಡಿದ್ದ ಪೋಸ್ಟ್ ಗಳನ್ನು ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ ಟ್ರೋಲರ್ ಗಳಿಗೆ ಸಲಹೆ ನೀಡಿದ್ದಾರೆ.
ಇನ್ನೂ ಕೆಲವರು ಮುಂಚಿತವಾಗಿಯೇ ಆರ್ಐಪಿ ಎಂದು ಹೇಳಿ ಪೋಸ್ಟ್ ಮಾಡಿದ್ದಾರೆ. ತನ್ನ ನಿಧನಕ್ಕಾಗಿ ಪ್ರಾರ್ಥಿಸಿದ ಟ್ರೋಲರ್ ಗಳ ವಿರುದ್ಧ ನಟಿ ವ್ಯಂಗ್ಯವಾಡಿದ್ದಾರೆ.
ತಮ್ಮ ರಾಜಕೀಯ ಪೋಸ್ಟ್ಗಳಿಂದಾಗಿ ನಟಿ ಸ್ವರಾ ಭಾಸ್ಕರ್ ಅವರು ಈ ಹಿಂದೆ ಆಗಾಗ್ಗೆ ಟ್ರೋಲ್ಗೆ ಒಳಗಾಗಿದ್ದರು. ಸಂಭಾವನೆ ಪಡೆದು ಟ್ರೋಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.