alex Certify ಕೋವಿಡ್ ಸೋಂಕಿಗೆ ಒಳಗಾಗಿದ್ದೀರಾ….? ಶಾಕಿಂಗ್ ಸಂಗತಿ ಬಿಚ್ಚಿಟ್ಟ ತಜ್ಞರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಸೋಂಕಿಗೆ ಒಳಗಾಗಿದ್ದೀರಾ….? ಶಾಕಿಂಗ್ ಸಂಗತಿ ಬಿಚ್ಚಿಟ್ಟ ತಜ್ಞರು…..!

ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿರಿಸಿ ಮೂರು ವರ್ಷಗಳಾಗಿವೆ. ಪ್ರಪಂಚವು ಇನ್ನೂ ಕೂಡ ಈ ರೋಗದ ವಿರುದ್ಧ ಹೋರಾಡುತ್ತಲೇ ಇದೆ. ಡಿಸೆಂಬರ್ 2019 ರಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲು ಈ ರೋಗ ಕಾಣಿಸಿಕೊಂಡಾಗಿನಿಂದ, ವಿಜ್ಞಾನಿಗಳು ವೈರಸ್ ಮತ್ತು ಅದರ ಅನೇಕ ರೂಪಾಂತರಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಇದೀಗ ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾದವರ ಬಗ್ಗೆ ಶಾಕಿಂಗ್ ಅಂಶವನ್ನು ಸಂಶೋಧಕರ ತಂಡ ಮಾಹಿತಿ ನೀಡಿದೆ.

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, 2020 ರಲ್ಲಿ ಕೋವಿಡ್ ಸೋಂಕಿಗೆ ಒಳಗಾದ ವಯಸ್ಸಾದವರಲ್ಲಿ ಮೂರನೇ ಒಂದು ಭಾಗದಷ್ಟು (100 ರಲ್ಲಿ 32) ಜನರು, ಕನಿಷ್ಠ ಒಂದು ಹೊಸ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಯಕೃತ್ತು ಸೇರಿದಂತೆ ಪ್ರಮುಖ ಅಂಗಗಳ ಮೇಲೆ ಕೋವಿಡ್ ಪರಿಣಾಮ ಬೀರಿದೆ. ಅಲ್ಲದೆ ಜನರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಕೂಡ ಕಂಡುಬಂದಿದೆ.

ಕೋವಿಡ್-19 ರೋಗಿಗಳಿಗೆ ಹೋಲಿಸಿದರೆ ಉಸಿರಾಟದ ವೈಫಲ್ಯ (ಪ್ರತಿ 100 ಜನರಿಗೆ ಹೆಚ್ಚುವರಿ 7.55), ಆಯಾಸ (100 ಜನರಿಗೆ 5.66 ಹೆಚ್ಚುವರಿ), ಅಧಿಕ ರಕ್ತದೊತ್ತಡ (100 ಜನರಿಗೆ 4.43 ಹೆಚ್ಚುವರಿ), ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಅಪಾಯ ಹೆಚ್ಚಾಗಿದೆ.

ಆಸ್ಪತ್ರೆಗೆ ದಾಖಲಾದ ಕೋವಿಡ್-19 ಹೊಂದಿರುವ ವ್ಯಕ್ತಿಗಳು ಹೆಚ್ಚಿನ ರೋಗಗಳ ಅಪಾಯವನ್ನು ಹೊಂದಿರುತ್ತಾರೆ. ಹಾಗಂತ ಎಲ್ಲರೂ ಅಂತಾ ಹೇಳಲಿಕ್ಕಾಗುವುದಿಲ್ಲ ಎಂದು ಅಧ್ಯಯನ ತಿಳಿಸಿದೆ. ಪುರುಷರು, 75 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ವಿವಿಧ ರೋಗಗಳ ಅಪಾಯವನ್ನು ಹೊಂದಿರುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...