ಶಿವಮೊಗ್ಗ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸ್ನೇಹಿತರು, ದಾನಿಗಳ ಸಹಾಯದಿಂದ ಮತ್ತು ತಮ್ಮ ಸ್ವಂತ ಹಣದಿಂದ 300 ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟ್ ಗಳನ್ನು ಒದಗಿಸಿ ಸುದ್ದಿಯಾಗದೇ ಕರ್ತವ್ಯ ನಿರ್ವಹಿಸಿದ ತಿಲಕ್ ನಗರ ನಿವಾಸಿಗಳಾದ ರಾಘವೇಂದ್ರ ಶೆಟ್ಟಿ ಮತ್ತು ಅವರ ತಂದೆ ಸತ್ಯನಾರಾಯಣ ಶೆಟ್ಟಿ ಅವರನ್ನು ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಇಂದು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಆದೇಶದಂತೆ ಎಲೆಮರೆ ಕಾಯಿಯಾಗಿ ಸಮಾಜಸೇವೆ ಸಲ್ಲಿಸಿದ ಲೋಕಲ್ ಹೀರೋ ಕಾರ್ಯಕ್ರಮದಡಿ ನಗರ ಘಟಕ ಇಂದು ಈ ಅಭಿನಂದನೆಯನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿ ಎಸ್. ದತ್ತಾತ್ರಿ, ಕಾರ್ಯದರ್ಶಿ ಮೋಹನ್ ರಾವ್ ಜಾಧವ್, ಬಿಜೆಪಿ ನಗರ ಕಾರ್ಯದರ್ಶಿ ಸಂತೋಷ್ ಬಳ್ಳೆಕೆರೆ, ಪಾಲಿಕೆ ಸದಸ್ಯ ವಿಶ್ವನಾಥ್, ಪ್ರಮುಖರಾದ ಕಿರಣ್, ಸನ್ಮಾನಿತರ ಕುಟುಂಬದವರು ಹಾಜರಿದ್ದರು.