ನವದೆಹಲಿ: ಕೊರೊನಾ ಸೋಂಕು, ಒಮಿಕ್ರಾನ್ ಆತಂಕದ ನಡುವೆ ಮಕ್ಕಳಲ್ಲಿ ವಿಚಿತ್ರ ಸಿಂಡ್ರೋಮ್ ಕಾಣಿಸಿಕೊಳ್ಳುತ್ತಿದ್ದು, ಮೊಬೈಲ್ ಗೇಮಿಂಗ್ ಸಿಂಡ್ರೋಮ್ ಗೆ ಮಕ್ಕಳು ಒಳಗಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಕೋವಿಡ್ ಮೊದಲ ಅಲೆ ವೇಳೆ ಶಾಲಾ-ಕಾಲೇಜುಗಳು ವರ್ಷಗಟ್ಟಲೇ ಬಾಗಿಲು ಮುಚ್ಚಿದ ಹಿನ್ನೆಲೆಯಲ್ಲಿ ಮಕ್ಕಳು ಮನೆಯಲ್ಲಿ ಮೊಬೈಲ್ ನಲ್ಲಿ ಗೇಮ್ ಆಡುವುದು, ಕಾರ್ಟೂನ್ ನೋಡುವುದರಲ್ಲಿಯೇ ಕಾಲ ಕಳೆದಿದ್ದರು. ಅತಿಯಾದ ಮೊಬೈಲ್ ಆಟಕ್ಕೆ ಅಂಟಿಕೊಂಡ ಮಕ್ಕಳಲ್ಲಿ ಮೊಬೈಲ್ ಗೇಮಿಂಗ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆ ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೊಬೈಲ್ ಗೇಮಿಂಗ್ ಬಗ್ಗೆ ಅಡ್ವೈಸರಿ ವರದಿ ಪ್ರಕಟಿಸಿದೆ.
ಸುದೀರ್ಘ ಹೋರಾಟದ ನಂತರ ತಮ್ಮ ಊರುಗಳತ್ತ ಹೊರಟ ರೈತರು
ಆನ್ ಲೈನ್ ಗೇಮ್ ಪರ್ಚೇಸಿಂಗ್ ಮೇಲೆ ಪೋಷಕರು ನಿಗಾ ವಹಿಸಬೇಕು ಹಾಗೂ ಇಂಟರ್ ನೆಟ್ ನಲ್ಲಿ ವೈಯಕ್ತಿಕ ವಿವರ ನೀಡದಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.