ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಹೀಗಾಗಿ ಅತಿ ಹೆಚ್ಚು ಉದ್ಯೋಗ ನಷ್ಟ ಅನುಭವಿಸಿದ ಕಂಪನಿಗಳ ಪಟ್ಟಿಯಲ್ಲಿ ಈ ಉದ್ಯಮವಿತ್ತು.
ಆದರೆ ಬದಲಾದ ಪರಿಸ್ಥಿತಿಯಲ್ಲಿ ಪ್ರಸಕ್ತ ಸಾಲಿನ ವೇಳೆ ಆಟೋ ಮೊಬೈಲ್ ಕ್ಷೇತ್ರ ಭರ್ಜರಿಯಾಗಿ ಚೇತರಿಸಿಕೊಂಡಿದೆ. ಬ್ಯಾಂಕ್ ಗಳ ಬಡ್ಡಿ ದರ ಏರಿಕೆ ಮತ್ತು ಹಣದುಬ್ಬರದ ನಡುವೆಯೂ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, ವಾಹನೋದ್ಯಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಅದರಲ್ಲೂ ಹಬ್ಬದ ಋತುವಿನಲ್ಲಿ ದ್ವಿಚಕ್ರ ಹಾಗೂ ಕಾರುಗಳ ಮಾರಾಟ ಭಾರಿ ಏರಿಕೆ ಕಂಡಿದ್ದು, ಕೆಲವೊಂದು ಜನಪ್ರಿಯ ಮಾಡೆಲ್ ಗಳನ್ನು ಖರೀದಿಸಬೇಕೆಂದರೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಾಹನಗಳ ಮಾರಾಟದಲ್ಲಿ ಶೇಕಡ 20ರಷ್ಟು ಏರಿಕೆ ಕಾಣಬಹುದೆಂದು ನಿರೀಕ್ಷೆ ಮಾಡಲಾಗಿದೆ.