ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ 10,000 ರೂ. ದಂಡ ವಿಧಿಸಿದೆ. ಒಂದು ಸ್ಥಳದಲ್ಲಿ 500ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಆದೇಶ ನೀಡಿದೆ. ಎಸಿ ಹಾಲ್, ಅಂಗಡಿ, ಮಾಲ್ ಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ, ನಾನ್ ಎಸಿ ಹಾಲ್ ಗಳಲ್ಲಿ ನಿಯಮ ಉಲ್ಲಂಘಿಸಿದರೆ 5000 ದಂಡ ವಿಧಿಸಿದೆ.
ಕೋವಿಡ್ ಪರೀಕ್ಷಾ ದರ ಮರು ನಿಗದಿ ಮಾಡಿದ್ದು, ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದರೆ 500 ರೂ ದರ, ಖಾಸಗಿ ಆಸ್ಪತ್ರೆಯಲ್ಲಿಯೇ ಕೋವಿಡ್ ಟೆಸ್ಟ್ ಗೆ 800 ರೂ, ಲ್ಯಾಬ್ ಗಳಿಗೆ 1,250 ರೂ, ಕೋವಿಡ್ ಟೆಸ್ಟ್ ಗೆ ಗರಿಷ್ಠ ಮೊತ್ತ 2,500 ರೂ ಹಾಗೂ ರ್ಯಾಪಿಡ್ ಟೆಸ್ಟ್ ಗೆ 400 ರೂ ನಿಗದಿ ಮಾಡಿ ಆದೇಶ ಹೊರಡಿಸಿದೆ.