ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರು ಯಾವುದೇ ಸರ್ಜರಿಗೆ ಒಳಗಾಗುತ್ತಿದ್ದರೆ ಕೆಲ ವಾರಗಳ ಕಾಲ ಕಾಯುವುದು ಉತ್ತಮ ಎಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಜ್) ಸಲಹೆ ನೀಡಿದೆ.
ಕೋವಿಡ್ ನಿಂದ ಗುಣವಾದವರು ಸರ್ಜರಿ ಮಾಡಿಸಿಕೊಳ್ಳಲು 6 ವಾರಗಳ ಕಾಲ ಕಾಯಲೇಬೇಕು. ಗುಣಮುಖರಾದವರು 102 ದಿನದೊಳಗೆ ಪದೇ ಪದೇ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವುದು ಬೇಡ. ಕಾರಣ ಕೊರೊನಾದಿಂದ ಗುಣಮುಖರಾಗಿದ್ದರೂ ದೇಹದಲ್ಲಿ ವೈರಸ್ ಇರುತ್ತದೆ ಎಂದು ತಿಳಿಸಿದೆ.
ಕೊರೊನಾನಿಂದ ಗುಣಮುಖರಾದವರಲ್ಲಿ 102 ದಿನಗಳವರೆಗೆ ಸತ್ತ ವೈರಸ್ ಕಣಗಳು ಹಾಗೆಯೇ ಇರುತ್ತದೆ. ದೇಹದಲ್ಲಿನ ವೈರಸ್ ಹೋಗಲು ಕನಿಷ್ಟ 102 ದಿನಗಳ ಅಗತ್ಯವಿದೆ. ಹಾಗಾಗಿ ಮತ್ತೆ ಕೋವಿಡ್ ಟೆಸ್ಟ್ ಗೆ ಒಳಗಾಗುವ ಅಗತ್ಯವಿಲ್ಲ. ಆದರೆ ಯಾವುದೇ ಸರ್ಜರಿ ಮಾಡಿಸಿಕೊಳ್ಳಬೇಕೆಂದರೆ 6 ವಾರಗಳ ಕಾಲ ಕಾಯುವುದು ಉತ್ತಮ ಎಂದು ಸಲಹೆ ನೀಡಿದೆ.