ಬೆಂಗಳೂರು : ಕೋವಿಡ್ ನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗಳಿಗೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಇದೀಗ ಪರಿಹಾರದ ಹಣ ಸಾರಿಗೆ ಸಿಬ್ಬಂದಿಗಳಿಗೆ ಮರಿಚೀಕೆಯಾಗಿದೆ.
ಕೊರೊನಾ ಮಾಹಾಮಾರಿಗೆ ಕೆ ಎಸ್ ಆರ್ ಟಿ ಸಿಯ 104 ಸಿಬ್ಬಂದಿ ಹಾಗೂ ಬಿಎಂಟಿಸಿಯ 109 ಸಿಬ್ಬಂದಿಗಳು ಬಲಿಯಾಗಿದ್ದು, ಈವರೆಗೆ ಕೇವಲ 7 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಪರಿಹಾರ ಕೇಳಲು ಹೋದ ಸಾರಿಗೆ ನೌಕರರ ಕುಟುಂಬಗಳಿಗೆ ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೋವಿಡ್ ನಿಂದ ಮೃತರಾದ 213 ಸಿಬ್ಬಂದಿಗಳ ಪೈಕಿ 7 ಜನರಿಗೆ ಈವರೆಗೆ ಒಟ್ಟು 30 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳು 5 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ. ಇತ್ತ ಮನೆಯ ದುಡಿಯುವ ಸದಸ್ಯನನ್ನು ಕಳೆದುಕೊಂಡು, ಅತ್ತ ಪರಿಹಾರದ ಹಣವೂ ಸಿಗದೇ ಇನ್ನಷ್ಟು ಸಂಕಷ್ಟಕ್ಕೀಡಾಗಿರುವ ಕುಟುಂಬಗಳು ಕಂಗಾಲಾಗಿ ಕಣ್ಣೀರಿಡುವಂತಾಗಿದೆ.