alex Certify ಕೋವಿಡ್ ಎಫೆಕ್ಟ್‌: ಆರು ಸ್ಪೆಷಲ್ ರೈಲುಗಳ ಸಂಚಾರ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಎಫೆಕ್ಟ್‌: ಆರು ಸ್ಪೆಷಲ್ ರೈಲುಗಳ ಸಂಚಾರ ರದ್ದು

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಪೂರ್ವ ರೈಲ್ವೇ ಆರು ರೈಲುಗಳ ಸಂಚಾರವನ್ನು ರದ್ದು ಮಾಡಿದೆ.

ಸಂಚಾರ ರದ್ದಾಗಲಿರುವ ರೈಲುಗಳ ಪಟ್ಟಿ ಇಂತಿದೆ:

02823 ಭುವನೇಶ್ವರ- ನವದೆಹಲಿ ಸ್ಪೆಷಲ್ ಜೂನ್ 11, ಜೂನ್ 14, ಜೂನ್ 17 ಹಾಗೂ ಜೂನ್ 18ರಂದು ಸಂಚರಿಸುವುದಿಲ್ಲ.

02824 ನವದೆಹಲಿ -ಭುವನೇಶ್ವರ ಸ್ಪೆಷಲ್ ಜೂನ್ 12, ಜೂನ್ 15, ಜೂನ್ 17 ಹಾಗೂ ಜೂನ್ 19.

02825 ಭುವನೇಶ್ವರ – ನವದೆಹಲಿ ಸ್ಪೆಷಲ್ ಜೂನ್ 16.

02826 ಭುವನೇಶ್ವರ – ನವದೆಹಲಿ ಸ್ಪೆಷಲ್ ಜೂನ್ 18.

02855 ಭುವನೇಶ್ವರ – ನವದೆಹಲಿ ಸ್ಪೆಷಲ್ ಜೂನ್ 12 ಮತ್ತು ಜೂನ್ 1.

02856 ನವದೆಹಲಿ – ಭುವನೇಶ್ವರ ಸ್ಪೆಷಲ್ ಜೂನ್ 13 ಮತ್ತು ಜೂನ್ 20.

ಇದೇ ವೇಳೆ, ದಕ್ಷಿಣ ಪೂರ್ವ ರೈಲ್ವೇ ಹಾಟಿಯಾ-ಯಶವಂತಪುರ ನಡುವಿನ ರೈಲುಗಳ ಓಡಾಟವನ್ನು ವಾರಕ್ಕೆ ಒಂದರಿಂದ ವಾರಕ್ಕೆ ಎರಡಕ್ಕೆ ಏರಿಕೆ ಮಾಡಿದೆ.

02835 ಹಾಟಿಯಾ-ಯಶವಂತಪುರ ಸ್ಪೆಷಲ್ ಈಗ ಮಂಗಳವಾರ ಮತ್ತು ಭಾನುವಾರ ಸಂಚರಿಸಲಿದೆ.

02836 ಯಶವಂತಪುರ-ಹಾಟಿಯಾ ಸ್ಪೆಷಲ್ ಈಗ ಗುರುವಾರ ಮತ್ತು ಮಂಗಳವಾರ ಸಂಚರಿಸಲಿದೆ.

ಮಿಕ್ಕ ರೈಲ್ವೇ ವಲಯಗಳಲ್ಲೂ ಸಹ ಅನೇಕ ರೈಲುಗಳ ಸಂಚಾರ ರದ್ದಾಗಿದೆ. ಕೋವಿಡ್ ಕಾರಣದಿಂದ ಜನಸಂಚಾರ ತೀರಾ ವಿರಳವಾಗಿರುವುದೇ ಇದಕ್ಕೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...