alex Certify ಕೋವಿಡ್‌-19 ಹೊಸ ರೂಪಾಂತರಿ XE ಸೋಂಕಿನ ಲಕ್ಷಣಗಳೇನು…? ನಿಮಗೆ ತಿಳಿದಿರಲಿ ಈ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌-19 ಹೊಸ ರೂಪಾಂತರಿ XE ಸೋಂಕಿನ ಲಕ್ಷಣಗಳೇನು…? ನಿಮಗೆ ತಿಳಿದಿರಲಿ ಈ ಕುರಿತ ಮಾಹಿತಿ

ಅತ್ಯಂತ ವೇಗವಾಗಿ ಹರಡುವ ಕೋವಿಡ್‌ ನ ಹೊಸ ರೂಪಾಂತರಿ ವೈರಸ್‌ XE ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ದೇಶದಲ್ಲಿ XE ಕಾಣಿಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದರೂ ಸಹ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದ 50 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಆದ್ರೆ ಆದಾಗ್ಯೂ, ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ತಜ್ಞರು ಜೀನೋಮ್ ಅನುಕ್ರಮದ ನಂತರ, ಭಾರತದಲ್ಲಿ XE ರೂಪಾಂತರವನ್ನು ಪತ್ತೆ ಹಚ್ಚಲಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದಿದ್ದಾರೆ.

ಸೋಂಕಿತ ಮಹಿಳೆ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್. ರೋಗಿಯಲ್ಲಿ ಯಾವುದೇ ಕೋವಿಡ್‌ ಲಕ್ಷಣಗಳಿಲ್ಲ. ಆಕೆ ಚೇತರಿಸಿಕೊಂಡಿದ್ದಾರೆ ಎಂದು ಮುಂಬೈ ಕಾರ್ಪೊರೇಶನ್‌ ತಿಳಿಸಿದೆ. ಫೆಬ್ರವರಿ 10ರಂದು ಈಕೆ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಬಂದಿದ್ದಾಳೆ. ಈಗಾಗ್ಲೇ ಕೋವಿಡ್ ಲಸಿಕೆಯ ಎರಡೂ ಡೋಸ್‌ ಪಡೆದಿದ್ದಾಳೆ. ‌ಆಫ್ರಿಕಾದಿಂದ ಬಂದ ಬಳಿಕೆ ಮಾರ್ಚ್ 2 ರಂದು ಮಹಿಳೆ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ವರದಿ ನೆಗೆಟಿವ್‌ ಬಂದಿತ್ತು. ಆ ಸಮಯದಲ್ಲೂ ಆಕೆ ಹೋಟೆಲ್‌ ಕೋಣೆಯಲ್ಲಿ ಕ್ವಾರಂಟೈನ್‌ ನಲ್ಲಿದ್ಲು.

XE ರೂಪಾಂತರಿ ಎಂದರೇನು ?

XE ರೂಪಾಂತರಿ ಮೊದಲು ಪತ್ತೆಯಾಗಿದ್ದು ಬ್ರಿಟನ್‌ ನಲ್ಲಿ. ಓಮಿಕ್ರಾನ್‌ ನ ಸಹ ರೂಪಾಂತರಿ BA.2 ಗಿಂತ ಹತ್ತು ಪಟ್ಟು ವೇಗವಾಗಿ ಹರಡುತ್ತದೆ. ಎಲ್ಲಾ ಕೋವಿಡ್‌ ರೂಪಾಂತರಿಗಳಿಗಿಂತ BA.2 ಅತಿ ವೇಗವಾಗಿ ಹರಡಬಲ್ಲ ಅಂಟು ರೋಗವೆಂದು ಹೇಳಲಾಗುತ್ತಿತ್ತು. ಆದ್ರೀಗ XE ರೂಪಾಂತರಿ ಅದನ್ನೂ ಮೀರಿಸಿದೆ. XE ರೂಪಾಂತರವು BA.1 ಮತ್ತು BA.2 ಓಮಿಕ್ರಾನ್ ತಳಿಗಳ ರೂಪಾಂತರವಾಗಿದೆ.

ಇದನ್ನು “ಪುನಃ ಸಂಯೋಜಕ” ಎಂದು ಉಲ್ಲೇಖಿಸಲಾಗುತ್ತದೆ. ಆರಂಭಿಕ ಅಧ್ಯಯನಗಳ ಪ್ರಕಾರ, XE ರೂಪಾಂತರವು BA.2 ಗಿಂತ 9.8 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ. ಇದನ್ನು ಪತ್ತೆಹಚ್ಚುವುದು ಬಹಳ ಕಷ್ಟ. ಹಾಗಾಗಿ ಇದನ್ನು ಸ್ಟೆಲ್ತ್ ರೂಪಾಂತರ ಎಂದೂ ಕರೆಯುತ್ತಾರೆ.

ಓಮಿಕ್ರಾನ್‌ XE ಲಕ್ಷಣಗಳೇನು..?

ಕೋವಿಡ್‌ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಲಸಿಕೆಯ ಸ್ಥಿತಿಗತಿ ಮತ್ತು ಹಿಂದಿನ ಸೋಂಕುಗಳಿಂದಾದ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿ ಕೋವಿಡ್ ನ ಲಕ್ಷಣಗಳು ಮತ್ತು ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಓಮಿಕ್ರಾನ್‌ XE ರೂಪಾಂತರಿಯ ಪ್ರಮುಖ ರೋಗ ಲಕ್ಷಣಗಳೆಂದರೆ ಜ್ವರ, ಗಂಟಲು ನೋವು, ಗಂಟಲು ಕೆರೆತ, ಕೆಮ್ಮು ಮತ್ತು ಶೀತ, ಚರ್ಮದಲ್ಲಿ ಕಿರಿಕಿರಿ, ಜಠರ-ಕರುಳಿನ ತೊಂದರೆ ಇತ್ಯಾದಿ.

ಸೋಂಕು ತೀವ್ರವಾಗಿರುವವರಿಗೆ ಹೃದಯಾಘಾತವಾಗಬಹುದು. ಕೆಲವೊಮ್ಮೆ ಸೋಂಕು ತೀವ್ರವಾದ ನರಗಳ ಕಾಯಿಲೆಗಳಿಗೆ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...