
ಕೋಪಕ್ಕೆ ಬುದ್ದಿ ಕೊಡಬಾರದು. ಕೋಪಕ್ಕೆ ಬುದ್ದಿ ಕೊಟ್ಟಾಗ ಯಡವಟ್ಟು ಆಗೋದು ಜಾಸ್ತಿ. ಇದಕ್ಕೆ ವಿದೇಶದಲ್ಲಿ ನಡೆದ ಘಟನೆಯೊಂದು ಉತ್ತಮ ಉದಾಹರಣೆ. ಕೋಪದಲ್ಲಿ ಮೊಬೈಲ್ ಫೋನ್ ಎಸೆದ ಹುಡುಗಿ, ಬಾಯ್ ಫ್ರೆಂಡ್ ಪ್ರಾಣ ತೆಗೆದಿದ್ದಾಳೆ.
22 ವರ್ಷದ ರೊಕ್ಸಾನಾ ಅಡೆಲಿನಾ ಎಂಬ ಯುವತಿ, ಬಾಯ್ ಫ್ರೆಂಡ್ 23 ವರ್ಷದ ಲೂಯಿಸ್ ಗ್ವಾಂಟೇ ಮೇಲೆ ಫೋನ್ ಎಸೆದಿದ್ದಾಳೆ. ಈ ಫೋನ್ ಆತನ ಸಾವಿಗೆ ಕಾರಣವಾಗಿದೆ. ಘಟನೆ ಅರ್ಜೆಂಟೀನಾದ ಲಾ ನ್ಯಾಸಿಯನದಲ್ಲಿ ನಡೆದಿದೆ. ಲೂಯಿಸ್, ರೊಕ್ಸಾನಾ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದನಂತೆ. ಆತನಿಂದ ತಪ್ಪಿಸಿಕೊಳ್ಳಲು ರೊಕ್ಸಾನಾ, ಮೊಬೈಲ್ ಎಸೆದಿದ್ದಾಳೆ. ಮೊಬೈಲ್ ತಲೆಗೆ ಬಿದ್ದಿದೆ.
ಘಟನೆ ನಂತ್ರ ಲೂಯಿಸ್, ತಲೆ ನೋವು, ತಲೆ ಸುತ್ತುವ ಸಮಸ್ಯೆ ಎದುರಿಸಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು, ತಲೆಗೆ ಗಂಭೀರ ಗಾಯವಾಗಿದೆ ಎಂದಿದ್ದರು. ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಸಾವಿನ ನಂತ್ರ ಆತನ ತಾಯಿ ಕೋರ್ಟ್ ಮೆಟ್ಟಿಲೇರಿದ್ದಳು. ಫೋನ್ ತುದಿ ತಲೆಗೆ ಬಡಿದು, ಆತನಿಗೆ ಗಂಭೀರ ಗಾಯವಾಗಿತ್ತು. ಇದ್ರಿಂದ ಆತ ಸಾವನ್ನಪ್ಪಿದ್ದನೆಂದು ತಾಯಿ ಆರೋಪಿಸಿದ್ದಳು.
ಇಂಥಹದೆ ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಆಕೆ ಆತ್ಮ ರಕ್ಷಣೆಗಾಗಿ ಈ ಕೆಲಸ ಮಾಡಿದ್ದಳು ಎಂದು ಕೋರ್ಟ್ ಹೇಳಿತ್ತು. ಹಾಗೆ ಈ ಪ್ರಕರಣದಲ್ಲೂ ಕೋರ್ಟ್ ಇದೇ ರೀತಿ ತೀರ್ಪು ತೆಗೆದುಕೊಳ್ಳುವ ಸಾಧ್ಯತೆಯಿದೆ.