ಅರಣ್ಯವೊಂದರಲ್ಲಿ ಕೋಪಗೊಂಡ ಕರಡಿಯೊಂದು ಹುಲಿಯನ್ನು ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಿಂದ ಈ ವಿಶಿಷ್ಟ ಘಟನೆ ಬೆಳಕಿಗೆ ಬಂದಿದೆ. ತಡೋಬಾದ ಟಿ 19 ಎಂದು ಗುರುತಿಸಲಾದ ಹುಲಿ, ಕರಡಿಗೆ ಅಡ್ಡಲಾಗಿ ನಿಂತಿದೆ. ಇದರಿಂದ ಕೋಪಗೊಂಡ ಕರಡಿ ಹುಲಿಯನ್ನು ಬೆನ್ನಟ್ಟಿದೆ. ಪ್ರವಾಸಿಗರು ಸೆರೆಹಿಡಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕರಡಿಯ ಮುಂದೆ ನಿಂತ ಹುಲಿ ಅದರ ದಾರಿಯನ್ನು ಅಡ್ಡಗಟ್ಟಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಇದರಿಂದ ಕೋಪಗೊಂಡ ಕರಡಿ ಏಕಾಏಕಿ ಹುಲಿಯ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಕರಡಿಯು ಬೆನ್ನಟ್ಟುವುದನ್ನು ಕಂಡ ವ್ಯಾಘ್ರ ಹೆದರಿ, ಬೆಕ್ಕಿನಂತೆ ತನ್ನ ಬಾಲವನ್ನು ಒತ್ತಿ ಓಡಿಹೋಗಲು ಪ್ರಾರಂಭಿಸುತ್ತದೆ. ಆದರೂ ಕೂಡ ಕರಡಿಯು ಹುಲಿಯನ್ನು ಬೆನ್ನಟ್ಟುವುದನ್ನು ಮುಂದುವರೆಸಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತಡೋಬಾ ಹುಲಿ ಸಂರಕ್ಷಿತ ಪ್ರದೇಶವು ವಿಶೇಷವಾಗಿ ಹುಲಿಗಳಿಗೆ ಹೆಸರುವಾಸಿಯಾಗಿದೆ. ವಿದೇಶದಿಂದ ಪ್ರವಾಸಿಗರು ಹುಲಿಗಳನ್ನು ನೋಡಲು ಇಲ್ಲಿಗೆ ಬರುತ್ತಾರೆ. ಪ್ರವಾಸಿಗರು ಆಗಾಗ್ಗೆ ಇಂತಹ ವಿಶಿಷ್ಟ ಮತ್ತು ಆಹ್ಲಾದಕರ ಅನುಭವಗಳನ್ನು ಇಲ್ಲಿ ಪಡೆಯುತ್ತಾರೆ.