ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ, ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತೆ. ಇಂತ ಸಮಸ್ಯೆ ನಿಮಗೂ ಕಾಡ್ತಾ ಇದ್ದರೆ ಇದು ವಾಸ್ತು ದೋಷವೂ ಆಗಿರಬಹುದು. ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಸರಿಯಾಗಿ ನಿದ್ರೆ ಬರೋದಿಲ್ಲ. ಶೀಘ್ರದಲ್ಲಿ ಈ ಬಗ್ಗೆ ಪರೀಕ್ಷೆ ನಡೆಸಿ ಕೊಠಡಿಯನ್ನು ಸರಿಪಡಿಸಿಕೊಳ್ಳಿ.
ನೀವು ನಿಮ್ಮ ಬೆಡ್ ರೂಂನಲ್ಲಿ ಫ್ರಿಜ್, ಅಡುಗೆ ಅನಿಲ, ಇನ್ವಾಲ್ಟರ್ ಇಟ್ಟಿದ್ದರೆ ಇಂದೇ ಅದನ್ನು ತೆಗೆದುಬಿಡಿ. ಇದು ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.
ನಿಮ್ಮ ತಲೆ ಉತ್ತರಕ್ಕೆ ಹಾಗೂ ಕಾಲು ಬಾಗಿಲ ಕಡೆ ಇದ್ದಲ್ಲಿ ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ನೀರಿನ ಬಾಟಲಿಯನ್ನು ಹಾಸಿಗೆಯ ಅಗ್ನಿ ಮೂಲೆಯಲ್ಲಿಡಬೇಡಿ. ಇದ್ರಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ.
ನಾಲ್ಕರ ಬದಲು ಐದು ಮೂಲೆಯಿರುವ ಕೋಣೆಯಲ್ಲಿ ಎಂದೂ ಮಲಗಬೇಡಿ.
ಸುಖ ನಿದ್ರೆಗಾಗಿ ನಿಮಗೆ ಹೊಂದುವ ಬಣ್ಣವನ್ನು ಮಲಗುವ ಕೋಣೆಯ ಗೋಡೆಗೆ ಬಳಿಯಿರಿ.
ಕೋಣೆಯ ಬಾಗಿಲು ಶಬ್ಧವಾಗದಂತೆ ನೋಡಿಕೊಳ್ಳಿ. ಬಾಗಿಲು ತೆಗೆದಾಗ ಶಬ್ದವಾದ್ರೆ ಅದು ನಿದ್ರೆಗೆ ಭಂಗ ತರುತ್ತದೆ.