ವಿರಾಟ್ ಕೊಹ್ಲಿ ಏನೇ ಹೊಸ ಲುಕ್ ಬದಲಾಯಿಸಿದ್ರು ಅದು ಬೇಗ ಅಭಿಮಾನಿಗಳನ್ನು ರೀಚ್ ಆಗೋದ್ರ ಜೊತೆಗೆ ಅಭಿಮಾನಿಗಳಿಗೆ ಅದು ಇಷ್ಟ ಆಗುತ್ತದೆ. ಇದೀಗ ವಿರಾಟ್ ಕೊಹ್ಲಿ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿರಾಟ್ ಕೊಹ್ಲಿಯ ಹೊಸ ಲುಕ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಹಾಗಾದ್ರೆ ಯಾವ ಲುಕ್ ಅದು ಅಂತೀರಾ ಈ ಸ್ಟೋರಿ ಓದಿ.
ಹೌದು, ಆಸ್ಟ್ರೇಲಿಯಾ ಸರಣಿ ಹಾಗೂ ಟಿ-20 ವಿಶ್ವಕಪ್ ಗೂ ಮುನ್ನ ಕೊಹ್ಲಿ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಈ ಹೇರ್ ಸ್ಟೈಲ್ ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಆಗ್ತಾ ಇದೆ. ಹೇರ್ ಸ್ಟೈಲಿಸ್ಟ್ ಆದ ರಶೀದ್ ಸಲ್ಮಾನಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ವಿರಾಟ್ ಕೊಹ್ಲಿ ಜೊತೆ ಇರುವ ವೀಡಿಯೋವನ್ನು ಹಾಕಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಕಿಂಗ್ ಕೊಹ್ಲಿಯ ಹೊಸ ನೋಟ ಎಂದು ಬರೆದಿಕೊಂಡಿದ್ದಾರೆ. ಅಷ್ಟೆ ಅಲ್ಲ ಅವರ ಜೊತೆಗಿನ ಫೋಟೋ ಕೂಡ ಶೇರ್ ಮಾಡಿದ್ದಾರೆ.
ಇತ್ತೀಚೆಗಷ್ಟೆ ಶತಕ ಬಾರಿಸುವ ಮೂಲಕ ಕೊಹ್ಲಿ ತಮ್ಮ ಫಾರ್ಮ್ ವಾಪಸ್ ಪಡೆದಿದ್ದಾರೆ. ಅಷ್ಟೆ ಅಲ್ಲ ಆ ಶತಕ 71ನೇ ಶತಕ ಇದಾಗಿತ್ತು. ಇದೀಗ ಮುಂಬರುವ ಆಟಗಳಲ್ಲಿ ಕೊಹ್ಲಿಯ ಮತ್ತೊಂದು ಶತಕವನ್ನು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ.
https://www.instagram.com/reel/Cim6DjdotFD/?utm_source=ig_embed&ig_rid=a0ca43fb-34b7-46f0-bcdd-79f3f6ff638f