12 ರಿಂದ 17 ವಯಸ್ಸಿನ ಮಕ್ಕಳಿಗೆ ನೀಡುವ ‘ಕೊವೊವ್ಯಾಕ್ಸ್’ ಲಸಿಕೆಯ ಬೆಲೆಯನ್ನು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇಳಿಕೆ ಮಾಡಿದೆ.
ಪ್ರತಿ ಡೋಸ್ ಗೆ 225 ರೂಪಾಯಿಗಳನ್ನು ನಿಗದಿ ಮಾಡಲಾಗಿದ್ದು, ಈ ಮೊದಲು ಇದರ ದರ 900 ರೂಪಾಯಿಗಳಾಗಿತ್ತು.
ನೊವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆ ಆಯ್ಕೆಯನ್ನು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಮೇರೆಗೆ ಸೋಮವಾರವಷ್ಟೇ ಕೋವಿನ್ ಪೋರ್ಟಲ್ ನಲ್ಲಿ ಸೇರಿಸಲಾಗಿತ್ತು.