alex Certify ಕೊಲೆ ಪ್ರಕರಣದಲ್ಲಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆ ಪ್ರಕರಣದಲ್ಲಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಅಂದರ್

2015ರಲ್ಲಿ ಪುರುಷರೊಬ್ಬರನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 27 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.‌

ಆರೋಪಿಯನ್ನು ನಿಧಿ ಅಲಿಯಾಸ್ ಭಾರತಿ ಎಂದು ಗುರುತಿಸಲಾಗಿದೆ. ಆಕೆಯ ಪತಿ ರಾಹುಲ್ ಜಾತ್ ದರೋಡೆಕೋರನಾಗಿದ್ದು, ಕೊಲೆಯಲ್ಲೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ 2018ರಿಂದ ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದಳು. ಈಕೆಯನ್ನು ನ್ಯಾಯಾಲಯವು ಘೋಷಿತ ಅಪರಾಧಿ ಎಂದು ಘೋಷಿಸಿತ್ತು.

ಸುಳಿವನ್ನು ಆಧರಿಸಿದ ಪೊಲೀಸರು ಘಾಜಿಯಾಬಾದ್​ ಕೆಫೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್​ ಕಮಿಷನರ್​ ಜಸ್ಮೀತ್​ ಸಿಂಗ್​ ಮಾಹಿತಿ ನೀಡಿದರು.

ಜಿಟಿಬಿ ಎನ್‌ಕ್ಲೇವ್‌ನಲ್ಲಿ ಸಾಗರ್ ಎಂಬಾತನ ಕೊಲೆ ಪ್ರಕರಣದಲ್ಲಿ ನಿಧಿಯನ್ನು ಈ ಹಿಂದೆ ಬಂಧಿಸಲಾಗಿತ್ತು. 2017 ರಲ್ಲಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಅವಳು ಭೂಗತಳಾಗಿದ್ದಳು ಮತ್ತು ಪ್ರಕರಣದ ವಿಚಾರಣೆಯ ಸಮಯದಲ್ಲಿ ಎಂದಿಗೂ ಹಾಜರಾಗಲಿಲ್ಲ ಎಂದು ಡಿಸಿಪಿ ಹೇಳಿದ್ದಾರೆ.

ಸಾಗರ್ ಹತ್ಯೆಯಲ್ಲಿ ನಿಧಿ ಸೇರಿದಂತೆ ಒಂಬತ್ತು ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಬೇರೊಬ್ಬನನ್ನು ಮದುವೆಯಾಗಿದ್ದರೂ ತನ್ನ ಸಹೋದರಿಯೊಂದಿಗೆ ಸಾಗರ್ ಗೆಳೆತನಕ್ಕೆ ನಿಧಿ ವಿರೋಧ ವ್ಯಕ್ತಪಡಿಸಿದ್ದಳು.

ನಿಧಿ ಮತ್ತು ಅವಳ ಪತಿ ಸಾಗರ್‌ನನ್ನು ತನ್ನ ಸಹೋದರಿಯಿಂದ ದೂರವಿರಲು ಕೇಳಿಕೊಂಡರು, ಆದರೆ ಅವನು ಕೇಳಲಿಲ್ಲ ಮತ್ತು ಆರತಿಯನ್ನು ಭೇಟಿಯಾಗುತ್ತಲೇ ಇದ್ದನು. ಈ ಕಾರಣದಿಂದ ನಿಧಿ ಇತರರೊಂದಿಗೆ ಸೇರಿ ಅಪಹರಣ ಮತ್ತು ಹತ್ಯೆಗೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...