alex Certify ಕೊಲೆಯಾಗಿದೆ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿದ್ದವನಿಗೆ 3 ದಿನ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆಯಾಗಿದೆ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿದ್ದವನಿಗೆ 3 ದಿನ ಜೈಲು

ತನ್ನ ಅಣ್ಣನನ್ನು ಪೋಷಕರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಕರೆ ಮಾಡಿದ ಬಂಜಾರಾ ಹಿಲ್ಸ್​​ನ ನಂದಿನಗರದ 36 ವರ್ಷದ ವ್ಯಕ್ತಿ ನೀಡಿದ ದೂರು ಸುಳ್ಳು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಮೂರು ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ.

ಡಿಸೆಂಬರ್​ 17ರ ರಾತ್ರಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಭಾನೋತ್​ ಲಾಲು ಎಂಬಾತ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ನನ್ನ ಅಣ್ಣನನ್ನು ಪೋಷಕರು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದನು. ಕರೆ ಸ್ವೀಕರಿಸಿದ ಕಂಟ್ರೋಲ್​ ರೂಮ್​ ಕೂಡಲೇ ಈ ಮಾಹಿತಿಯನ್ನು ಬಂಜಾರ ಹಿಲ್ಸ್​ ಪೊಲೀಸರಿಗೆ ರವಾನಿಸಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ರಾತ್ರೋ ರಾತ್ರಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ದೂರಿನ ಗಂಭೀರತೆಯನ್ನು ಅರಿತ ಪೊಲೀಸರು ಕೇವಲ 7 ನಿಮಿಷಗಳ ಒಳಗಾಗಿ ಸ್ಥಳಕ್ಕೆ ಧಾವಿಸಿದ್ದಾರೆ.

ಆದರೆ ಸ್ಥಳಕ್ಕೆ ಆಗಮಿಸಿದ ವೇಳೆಯಲ್ಲಿ ಪೊಲೀಸರಿಗೆ ಶಾಕ್​ ಕಾದಿತ್ತು. ಏಕೆಂದರೆ ಲಾಲು ಎಂಬಾತ ಹೇಳಿದ ಸ್ಥಳದಲ್ಲಿ ಯಾವುದೇ ಕೊಲೆ ನಡೆದಿರಲಿಲ್ಲ. ತನಿಖೆಯ ವೇಳೆ ಲಾಲು ತಮಾಷೆಗಾಗಿ ಈ ಕಾಲ್​ ಮಾಡಿದ್ದ ಹಾಗೂ ಪೊಲೀಸರ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಲಾಲು ವಿರುದ್ಧ ಕೇಸ್​ ದಾಖಲಿಸಿದ ಪೊಲೀಸರು ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​ ಈತನಿಗೆ ಮೂರು ದಿನಗಳ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...