
ಈ ಹಿಂದೆ ಮದುವೆಗಳಿಗೆ 100 ಜನರಿಗೆ ಅವಕಾಶ ನೀಡಲಾಗಿತ್ತು, ಈ ಹೊಸ ಆದೇಶದಲ್ಲಿ 200 ಜನರಿಗೆ ಅವಕಾಶ ನೀಡಲಾಗಿದೆ. ಹೋಟೆಲ್, ಬಾರ್, ಪಬ್ ಮತ್ತು ರೆಸ್ಟೊರೆಂಟ್ಗಳಿಗೆ 100% ಅವಕಾಶ ನೀಡಿದ್ದಾರೆ. ಆದರೆ ಕಲ್ಯಾಣ ಮಂಟಪಗಳಿಗೆ ಇಷ್ಟೇ ಜನ ಇರಬೇಕು ಎಂಬ ನಿಯಮ ಮಾಡಿದ್ದಾರೆ. ನಾವು ಸಂಪೂರ್ಣ ಅವಕಾಶವನ್ನು ಕೇಳುತ್ತಿಲ್ಲಾ, ಕನಿಷ್ಠ 50% ಅವಕಾಶ ಕೊಡಿ. ಇಲ್ಲವೇ ಮಂಟಪಗಳ ಗಾತ್ರಕ್ಕೆ ಅನುಗುಣವಾಗಿ ಅವಕಾಶ ಕೊಡಿ ಎಂದು ಕಲ್ಯಾಣ ಮಂಟಪಗಳ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಸಂಬಂಧ ಇಂದು ಚರ್ಚೆ ನಡೆಸಿರುವ ಕಲ್ಯಾಣ ಮಂಟಪದ ಮಾಲೀಕರು, ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿಗೆ ಮುಂದಾಗಿದ್ದಾರೆ. ಒಂದು ವೇಳೆ ಇವರ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ರೆ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
50% ಅವಕಾಶ ನೀಡುವಂತೆ ಕಲ್ಯಾಣ ಮಂಟಪ ಮಾಲೀಕರು ಒತ್ತಾಯಿಸುತ್ತಿರುವುದು ಏಕೆ..?
1. ಮದುವೆ ಸೀಜ಼ನ್ ಇರೋದು 3 ತಿಂಗಳು.
2. ಫ್ರೆಬ್ರವರಿ, ಮಾರ್ಚ್, ಏಪ್ರಿಲ್ ಮಾತ್ರ ಮದುವೆ ಸೀಜನ್ ಈ ತಿಂಗಳುಗಳಲ್ಲೆ ಈ ರೀತಿಯ ನಿಯಮ ಹೇರಿದರೆ ಮಂಟಪಗಳೆ ಬುಕ್ ಆಗಲ್ಲ.
3. ಕೋವಿಡ್ ನ 2ನೇ ಅಲೆಯಲ್ಲು ಇದೇ ರೀತಿ ನಿರ್ಬಂಧ ವಿಧಿಸಲಾಗಿತ್ತು.
4. 100, 200 ಜನರ ಮಿತಿ ಹೇರಿದ್ರೆ ಜನ ಮಂಟಪಗಳತ್ತ ಮುಖ ಮಾಡೊಲ್ಲ, ದೇವಸ್ಥಾನ, ಮನೆ ಬಳಿಯೇ ಮದುವೆ ಮಾಡ್ತಾರೆ.
5. ಮದುವೆಗಳೆ ನಡೆಯದಿದ್ರೆ ಮಂಟಪಗಳಲ್ಲಿ ಕೆಲಸ ಮಾಡುವ ಅಡುಗೆ, ಕ್ಲೀನರ್ಸ್ ಇತರೆ ಸಿಬ್ಬಂದಿಗಳಿಗೂ ಜೀವನ ನಿರ್ವಹಣೆ ಕಷ್ಟ.
6. ಕಠಿಣ ನಿಯಮದಿಂದ ಮದುವೆ ಮಂಟಪಗಳು ಬುಕ್ ಆಗ್ತಿಲ್ಲ.
7. ಕೋವಿಡ್ ನಿಯಮಗಳಿಂದ ಬುಕ್ ಆದ ಮದುವೆಗಳ ದಿನಾಂಕ ಮುಂದೂಡಿಕೆಯಾಗ್ತಿದೆ. ಕೆಲವರು ಕ್ಯಾನ್ಸಲ್ ಮಾಡಿಕೊಳ್ತಿದ್ದಾರೆ.
8. ಛೌಟ್ರಿಗಳು ಕ್ಲೋಸ್ ಆಗಿದ್ದರೂ ವಿದ್ಯುತ್, ನೀರಿನ ಬಿಲ್, ಟ್ಯಾಕ್ಸ್, GST ಇಂದ ರಿಯಾಯಿತಿಯೇ ಇಲ್ಲ.
9. ಇಷ್ಟೇ ಜನರು ಭಾಗವಹಿಸಬೇಕು ಎಂಬ ಮಿತಿಯಿಂದ ಶೇ.90 ರಷ್ಟು ಕಲ್ಯಾಣ ಮಂಟಪಗಳಿಗೆ ಭಾರೀ ನಷ್ಟವಾಗಿದೆ.