ದೇಶದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಜೋರಾಗಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆ ಆತಂಕ ಮೂಡಿಸಿದೆ. ಕೊರೊನಾ ಸೋಂಕು ಮನುಷ್ಯನ ದೇಹ ಪ್ರವೇಶಿಸಿದ ನಂತರ ಕೆಲವೊಂದು ಸಲ ಮೂರು ಬಾರಿ RTPCR ಟೆಸ್ಟ್ ಮಾಡಿಸಿದರೂ ಕೂಡ ಪತ್ತೆಯಾಗುವುದಿಲ್ಲ. ಶ್ವಾಸಕೋಶದಲ್ಲಿ ಸೇರಿಕೊಳ್ಳುವ ಸೋಂಕು ಪರೀಕ್ಷೆಯಲ್ಲಿ ಗೊತ್ತಾಗುವುದಿಲ್ಲ. ನಂತರದ ಮೂರ್ನಾಲ್ಕು ದಿನಗಳಲ್ಲಿ ತೀವ್ರವಾದ ಉಸಿರಾಟ ಸಮಸ್ಯೆ ಎದುರಾಗಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಶೇಕಡ 15 ರಿಂದ 20 ರಷ್ಟು ಪ್ರಕರಣಗಳಲ್ಲಿ ಕೊರೊನಾ ಲಕ್ಷಣ ಹೊಂದಿದ್ದರೂ RTPCR ನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಕೆಲವರು ಆಸ್ಪತ್ರೆಗೆ ದಾಖಲಾಗದೇ ವಿಳಂಬ ಮಾಡುವುದರಿಂದ ಸೋಂಕು ಹರಡುವ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಶೀತ, ಜ್ವರ, ನೆಗಡಿ ಉಸಿರಾಟದ ಸಮಸ್ಯೆ ಇದ್ದರೆ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಕೊರೋನಾ ಹೊಸ ಲಕ್ಷಣವೆಂದರೆ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಉತ್ತಮವಾಗಿದ್ದರೂ ಸುಸ್ತು, ವಾರಗಟ್ಟಲೆ ಜ್ವರ ಕಾಣಿಸಿಕೊಳ್ಳುತ್ತದೆ. ರೂಪಾಂತರಿ ಕೊರೋನಾ ವೈರಸ್ ಅಪಾಯಕಾರಿಯಾಗದಿದ್ದರೂ ಸೋಂಕಿತರನ್ನು ಸುಸ್ತು ಮಾಡುತ್ತದೆ. ಇಂಥವರು ಶ್ವಾಸಕೋಶದಲ್ಲಿರುವ ಕೊರೊನಾ ಪತ್ತೆಹಚ್ಚಲು ಹೆಚ್ಚುವರಿ ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನಲಾಗಿದೆ.