alex Certify ಕೊರೋನಾ ಆತಂಕದಲ್ಲಿದ್ದವರಿಗೆ ಖುಷಿ ಸುದ್ದಿ: ಮಾ. 11 ರ ನಂತ್ರ ಸಾಮಾನ್ಯ ಕಾಯಿಲೆಯಾಗಲಿದೆ ಕೋವಿಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಆತಂಕದಲ್ಲಿದ್ದವರಿಗೆ ಖುಷಿ ಸುದ್ದಿ: ಮಾ. 11 ರ ನಂತ್ರ ಸಾಮಾನ್ಯ ಕಾಯಿಲೆಯಾಗಲಿದೆ ಕೋವಿಡ್

ಮಾರ್ಚ್​ 11ರ ವೇಳೆಗೆ ಕೋವಿಡ್​ ಸಾಂಕ್ರಾಮಿಕವು ಸ್ಥಳೀಯ ಕಾಯಿಲೆಯಾಗಿ ಬದಲಾಗುತ್ತದೆ ಎಂದು ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್​ ಪಾಂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೊಸ ರೂಪಾಂತರಿಗಳು ಸೃಷ್ಟಿಯಾಗದೇ ಇದ್ದರೆ ಮಾರ್ಚ್​ 11ರ ವೇಳೆಗೆ ಕೋವಿಡ್​ ಒಂದು ಸ್ಥಳೀಯ ಕಾಯಿಲೆಯಾಗಲಿದೆ. ಡೆಲ್ಟಾ ರೂಪಾಂತರಿಯನ್ನು ಓಮಿಕ್ರಾನ್​ ಆಕ್ರಮಿಸಿದರೆ ಖಂಡಿತವಾಗಿಯೂ ಕೊರೊನಾ ಸ್ಥಳೀಯ ಕಾಯಿಲೆಯಾಗುತ್ತದೆ. ಯಾವುದೇ ಹೊಸ ರೂಪಾಂತರಿಗಳು ಸೃಷ್ಟಿಯಾಗಿಲ್ಲವೆಂದರೆ ಕೊರೊನಾ ಸ್ಥಳೀಯ ಕಾಯಿಲೆಯಾಗಿ ಬದಲಾಗಿದೆ ಎಂದರ್ಥವೆಂದು ಸಮೀರನ್​ ಹೇಳಿದ್ದಾರೆ.

ಮಾರ್ಚ್​ 11ರಿಂದ ನಾವು ಸ್ವಲ್ಪ ಕೊರೊನಾದಿಂದ ಬಿಡುವು ಪಡೆಯಲು ಆರಂಭಿಸುತ್ತೇವೆ. ದೆಹಲಿ ಹಾಗೂ ಮುಂಬೈನಲ್ಲಿ ಏರುತ್ತಿರುವ ಪ್ರಕರಣಗಳನ್ನು ನೋಡಿದರೆ ನಾವು ಇನ್ನೂ ಎರಡು ವಾರಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ. ದೆಹಲಿ ಹಾಗೂ ಮುಂಬೈನಲ್ಲಿ 80:20 ಅನುಪಾತದಲ್ಲಿ ಓಮಿಕ್ರಾನ್​ ಹಾಗೂ ಡೆಲ್ಟಾ ಪ್ರಕರಣಗಳು ಇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...