ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಮಕ್ಕಳಿಗೆ ಕೊರೊನಾ ಮೂರನೇ ಅಲೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೆ ಅದಾಗಲೇ ಕೊರೊನಾ ಮೂರನೇ ಅಲೆ ಆರಂಭವಾಗಿದೆ ಎಂಬ ವಿಚಾರ ಬಹುತೇಕರಿಗೆ ಗೊತ್ತೇ ಇಲ್ಲ ಎಂದು ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ 15 ದಿನಗಳಿಂದಲೇ ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಸಾಧಾರಣ ಜ್ವರ, ಮೈಕೈ ನೋವು, ನೆಗಡಿ, ಕೆಮ್ಮು ಇದು ಸಾಮಾನ್ಯ ಲಕ್ಷಣವಾಗಿದೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಕಂಡುಬಂದ ಸಾಮಾನ್ಯ ಲಕ್ಷಣಗಳೇ ಆರಂಭಿಕ ಹಂತದಲ್ಲಿ ಮೂರನೇ ಅಲೆಯಲ್ಲಿ ಕಂಡು ಬರುತ್ತಿದೆ. ಎರಡನೇ ಅಲೆಯಲ್ಲಿ ಬಹುತೇಕ ಎಲ್ಲರೂ ಇನ್ ಫೆಕ್ಟ್ ಆಗಿರುವುದರಿಂದ ಎಲ್ಲರಲ್ಲಿಯೂ ತಾನಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಿದೆ. ಹಾಗಾಗಿ ಕೊರೊನಾ ಮೂರನೇ ಅಲೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ರಮೇಶ್ ಅರವಿಂದ್
ಯಾವುದೇ ಸಾಂಕ್ರಾಮಿಕ ರೋಗ ಕೂಡ 2 ವರ್ಷದವರೆಗೂ ಇರುತ್ತದೆ. ಸಾಂಕ್ರಾಮಿಕ ರೋಗಗಳು 18 ತಿಂಗಳಲ್ಲಿ ಕಡಿಮೆಯಾಗುತ್ತದೆ. ಕಾರಣ ವ್ಯಕ್ತಿಗಳಲ್ಲಿ ನಿರ್ಮಾಣವಾಗುವ ಆಂಟಿ ಬಾಡಿ ಅಥವಾ ರೋಗ ನಿರೋಧಕ ಶಕ್ತಿ ಹೆಚ್ಚಳದಿಂದಾಗಿ ರೋಗ ಹರಡುವಿಕೆ ಕಡಿಮೆಯಾಗುತ್ತದೆ ಎಂದು ಡಾ.ರಾಜು ತಿಳಿಸಿದ್ದಾರೆ. ಕೋವಿಡ್ ಮೂರನೇ ಅಲೆ ಅಥವಾ ಸೋಂಕು ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ? ಕೊರೊನಾದಿಂದ ಸುರಕ್ಷಿತವಾಗಿರಲು ಅನುಸರಿಸಬೇಕಾದ ಸಾಮಾನ್ಯ ಕ್ರಮ ಏನು ಎಂಬ ಬಗ್ಗೆ ಡಾ.ರಾಜು ಅವರ ಈ ವಿಡಿಯೋ ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.