alex Certify ಕೊರೊನಾ ಹೆಚ್ಚಳ, ಮತ್ತೆ ಮುಂದೂಡಿಕೆಯಾದ ಜನಗಣತಿ ಪ್ರಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೆಚ್ಚಳ, ಮತ್ತೆ ಮುಂದೂಡಿಕೆಯಾದ ಜನಗಣತಿ ಪ್ರಕ್ರಿಯೆ

2021 ರ ಜನಗಣತಿ ಮತ್ತು ಜನಗಣತಿಗೆ ಸಂಬಂಧಪಟ್ಟ ಇತರ ಚಟುವಟಿಕೆಗಳನ್ನು ಕೊರೋನಾ ಸಾಂಕ್ರಾಮಿಕದಿಂದ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಗೃಹ ಸಚಿವಾಲಯ ಕಳೆದ ತಿಂಗಳು ಸಂಸತ್ತಿಗೆ ತಿಳಿಸಿತ್ತು.‌ ಈ ನಿರ್ಧಾರಕ್ಕೆ ಅನುಗುಣವಾಗಿ, ಭಾರತೀಯ ರಿಜಿಸ್ಟ್ರಾರ್ ಜನರಲ್ (RGI) ಮತ್ತು ಜನಗಣತಿ ಆಯುಕ್ತ ವಿವೇಕ್ ಜೋಶಿ ಅವರು ಕಳೆದ ತಿಂಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ, ಆಡಳಿತಾತ್ಮಕ ಗಡಿಗಳಲ್ಲಿ ಬದಲಾವಣೆಗಳನ್ನು ಮಾಡುವ ದಿನಾಂಕವನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.

ಮನೆಗಳನ್ನ ಲಿಸ್ಟ್ ಮಾಡುವ ಹಂತ ಮತ್ತು ಜನಸಂಖ್ಯೆಯ ಎಣಿಕೆ ಸೇರಿದಂತೆ ಒಟ್ಟು ಜನಗಣತಿ ಕಾರ್ಯಾಚರಣೆಯ ಸಮಯದಲ್ಲಿ, ರಾಜ್ಯಗಳಾಗಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಾಗಲಿ ತಮ್ಮ ಜಿಲ್ಲೆಗಳು, ಪಟ್ಟಣಗಳು, ಗ್ರಾಮಗಳ ಗಡಿಗಳನ್ನು ಬದಲಾಯಿಸಬಾರದು ಎಂಬ ಕಾನೂನಿದೆ‌. ಆದರೆ ಆಯುಕ್ತ ಜೋಶಿಯವರ ಪತ್ರದಲ್ಲಿ ಜೂನ್ ತಿಂಗಳ ಅಂತ್ಯದವರೆಗೆ ಗಡಿಗಳನ್ನ ವಿಸ್ತರಿಸಬಹುದು ಎಂಬ ಮಾಹಿತಿ ನೀಡಿರುವುದರಿಂದ ಜೂನ್ ತಿಂಗಳ ನಂತರ ಜನಗಣತಿ ಕಾರ್ಯ ಶುರುವಾಗಬಹುದು ಎಂದರ್ಥ.

ಮೂಲತಃ, ಮನೆ-ಪಟ್ಟಿ ಮತ್ತು ವಸತಿ ಗಣತಿಯ ಫೀಲ್ಡ್ ವರ್ಕ್ ನ ಮೊದಲ ಹಂತ ಏಪ್ರಿಲ್ 2020 ರಿಂದ ಸೆಪ್ಟೆಂಬರ್ 2020 ರ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ 45 ದಿನಗಳ ಅವಧಿಯಲ್ಲಿ ನಡೆಸಬೇಕಿತ್ತು. ನಂತರ 2021ರ ಫೆಬ್ರವರಿ 9 ರಿಂದ 28ರವರೆಗೆ ಜನಸಂಖ್ಯೆ ಎಣಿಕೆಯನ್ನ ಕೈಗೊಳ್ಳಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದಿಂದ ಜನಗಣತಿಗೆ ಈ ಹಿಂದೆಯು ಬ್ರೇಕ್ ಬಿದ್ದಿತ್ತು.

ಖಚಿತವಾಗಿ ಹೇಳುವುದಾದರೆ, ಗೃಹ ಸಚಿವಾಲಯ ಅಥವಾ ಜನಗಣತಿ ಆಯುಕ್ತರ ಕಚೇರಿಯು ಜನಗಣತಿ ಕಾರ್ಯಾಚರಣೆಯನ್ನ ಮುಂದೂಡಲು ಯಾವುದೇ ಅಧಿಕೃತ ಆದೇಶ ಅಥವಾ ಸುತ್ತೋಲೆಯನ್ನು ಹೊರಡಿಸಿಲ್ಲ. ಆದರೆ ಗಡಿ ವಿಸ್ತರಣೆಯ ದಿನಾಂಕವನ್ನ ವಿಸ್ತರಿಸಿರುವುದು ಜನಗಣತಿಯ ಪ್ರಕ್ರಿಯೆ ಮುಂದೂಡಿಕೆಯಾಗಿದೆ ಎಂಬುದನ್ನ ಮನವರಿಕೆ ಮಾಡಿದೆ‌. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನಗಣತಿ ಮತ್ತು ಜನಗಣತಿ ಸಂಬಂಧಿತ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಡಿಸೆಂಬರ್ 7, 2021 ರಂದು ಸಂಸತ್ತಿಗೆ ತಿಳಿಸಿದ್ದರು. ಆದರೆ ಎಲ್ಲಿಯವರೆಗು ಮುಂದೂಡಿಕೆಯಾಗಿದೆ, ಯಾವಾಗ ಶುರುವಾಗತ್ತೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...