ದೇಶದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗತೊಡಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಒಂದೇ ದಿನ ಪ್ರಕರಣಗಳಲ್ಲಿ ಶೇಕಡ 40ರಷ್ಟು ಏರಿಕೆ ಕಂಡುಬಂದಿದೆ. ಹೀಗಾಗಿ ಕೆಲವೊಂದು ರಾಜ್ಯಸರ್ಕಾರಗಳು ಮಾಸ್ಕ್ ಕಡ್ಡಾಯವನ್ನು ಮತ್ತೆ ಜಾರಿಗೆ ತರಲು ಚಿಂತನೆ ನಡೆಸುತ್ತಿವೆ.
ಇದರ ಮಧ್ಯೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಬೇಕು ಎಂದು ಎಲ್ಲಾ ವಿಮಾನಯಾನ ಕಂಪನಿಗಳಿಗೆ ಆದೇಶಿಸಿದೆ. ಜೊತೆಗೆ ಮಾಸ್ಕ್ ಧರಿಸದವರಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶ ನೀಡಬಾರದು ಎಂದು ಹೇಳಿದೆ.
ಒಂದೊಮ್ಮೆ ಪ್ರಯಾಣಿಕ ವಿಮಾನದಲ್ಲಿ ಮಾಸ್ಕ್ ತೆಗೆದರೆ ಆತ / ಆಕೆಗೆ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಒಂದೊಮ್ಮೆ ಅದಕ್ಕೆ ನಿರಾಕರಿಸಿದರೆ ವಿಮಾನದಿಂದ ಕೆಳಗಿಳಿಸಬೇಕು ಎಂದು ಸೂಚಿಸಲಾಗಿದೆ. ವಿಮಾನ ಹಾರಾಟದಲ್ಲಿದ್ದ ಸಂದರ್ಭದಲ್ಲಿ ಮಾಸ್ಕ್ ತೆಗೆದರೆ ಅಂತ ಪ್ರಯಾಣಿಕರಿಗೆ ಪುಂಡ ಪ್ರಯಾಣಿಕ ಹಣೆಪಟ್ಟಿ ಅಂಟಿಸಬೇಕು ಎಂದು ತಿಳಿಸಲಾಗಿದೆ. ಕೊನೆಗೆ ಅಂತಹ ಪ್ರಯಾಣಿಕರಿಗೆ ಕೆಲವು ಅವಧಿಗೆ ವಿಮಾನಯಾನ ನಿರ್ಬಂಧಿಸಲಾಗುತ್ತದೆ ಎನ್ನಲಾಗಿದೆ.