ಓಮಿಕ್ರಾನ್ ಟೆಸ್ಟ್ ಮಾಡುವುದಕ್ಕಾಗಿ ಟೆಸ್ಟಿಂಗ್ ಕಿಟ್ ನ್ನು ಟಾಟಾ ಮೆಡಿಕಲ್ ಹಾಗೂ ಟಾಟಾ ಎಂಡಿ ತಯಾರಿಸಿದ್ದು, ಮಾರುಕಟ್ಟೆಯಲ್ಲಿ 250 ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದೆ.
ಈ ಟೆಸ್ಟಿಂಗ್ ಕಿಟ್, ಕೊರೊನಾ ಹಾಗೂ ಓಮಿಕ್ರಾನ್ ಸೇರಿದಂತೆ ರೂಪಾಂತರಿಗಳನ್ನು ಪತ್ತೆ ಹಚ್ಚುತ್ತದೆ. ಇದಕ್ಕೆ ಓಮಿಸ್ಯೂರ್ ಎಂದು ಹೆಸರಿಡಲಾಗಿದ್ದು, ಇದಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಒಪ್ಪಿಗೆ ಸೂಚಿಸಿದೆ.
ಈ ಟೆಸ್ಟಿಂಗ್ ಕಿಟ್ ಶೇ.99.24ರಷ್ಟು ಪರಿಣಾಮಕಾರಿಯಾಗಿ ಓಮಿಕ್ರಾನ್ ನ್ನು ಪತ್ತೆ ಹಚ್ಚುತ್ತದೆ. ಡಾ. ವಿ. ರವಿ ಅವರ ನೇತೃತ್ವದಲ್ಲಿ ನುರಿತ ತಜ್ಞರು ಇದನ್ನು ಕಂಡು ಹಿಡಿದಿದ್ದಾರೆ. ಇದು ವೈರಸ್ ನ ಆಂಟಿಜೆನ್ ಗಳನ್ನು ಪತ್ತೆ ಮಾಡುವುದಿಲ್ಲ. ಆದರೆ, ವೈರಲ್ ಅನುವಂಶಿಕ ವಸ್ತುಗಳನ್ನು ಇದು ಪತ್ತೆ ಹಚ್ಚುತ್ತದೆ.
ಜನರು ತಾವು ಇದ್ದಲ್ಲಿಯೇ ಇದರಿಂದ ಟೆಸ್ಟ್ ಮಾಡಿಕೊಳ್ಳಬಹುದು. ಇದರ ಆಧಾರದ ಮೇಲೆ ಜನರು ತಮಗೆ ಕೊರೊನಾ ವೈರಸ್ ಅಂಟಿಕೊಂಡಿದೆಯೇ ಇಲ್ಲವೋ ಎಂಬುವುದನ್ನು ತಿಳಿಯಬಹುದು. ಇದು ಜನರಿಗೆ ತುಂಬಾ ಉಪಯೋಗವಾಗಲಿದೆ.