alex Certify ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ: ರಾಜ್ಯ ರಾಜಧಾನಿಯಲ್ಲಿ ಈ ನಿಯಮಗಳ ಅನುಷ್ಠಾನ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ: ರಾಜ್ಯ ರಾಜಧಾನಿಯಲ್ಲಿ ಈ ನಿಯಮಗಳ ಅನುಷ್ಠಾನ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಹಾಗೂ ಒಮಿಕ್ರಾನ್ ನಿಯಂತ್ರಣಕ್ಕೆ ಸರ್ಕಾರ ಸಜ್ಜಾಗುತ್ತಿದೆ. ಈಗಾಗ್ಲೇ ನೈಟ್ ಕರ್ಪ್ಯೂ ಹೇರಿರುವ ಸರ್ಕಾರ ಮುಂದೆ ಏನೆಲ್ಲಾ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಇದ್ದೆ ಇದೆ. ಇಂದು ಸಂಜೆ 6:30ಕ್ಕೆ ಸಿಎಂ ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ತಾಂತ್ರಿಕ ಸಲಹಾ ಸಮಿತಿಯಿಂದ ಕೋವಿಡ್ ನಿಯಂತ್ರಣಕ್ಕೆ ಅನುಸರಿಸಬೇಕಾದ ನಿಯಮಗಳ ಚರ್ಚೆಯಾಗಲಿದೆ.

ಮೂಲಗಳ ಪ್ರಕಾರ ಈಗಾಗಲೇ ತಜ್ಞರ ಸಮಿತಿ, ಸಧ್ಯ ಇರುವ ಪರಿಸ್ಥಿತಿ, ‌ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಇದ್ದು, ಸಭೆಯಲ್ಲಿ ನಿಯಮಗಳಲ್ಲ ಬದಲಿಗೆ ಲಾಕ್ ಡೌನ್ ಮಾಡಬೇಕಾ, ಬೇಡವ ಅನ್ನೋ ನಿರ್ಧಾರವಾಗಲಿದೆ ಎಂದು ಹೇಳಲಾಗ್ತಿದೆ. ಈ ಸಭೆಯಲ್ಲಿ, ಮತ್ತೊಮ್ಮೆ ತಜ್ಞರ ಅಭಿಪ್ರಾಯ ಪಡೆದು ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಲಾಕ್ ಡೌನ್ ಭವಿಷ್ಯ ನಿರ್ಧರಿಸಲಾಗುವುದು.

ಕೊರೋನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳಬುದಾದ ನಿಯಮಗಳು ಇಲ್ಲಿವೆ

> ಈಗಷ್ಟೇ ಆರ್ಥಿಕ ಚಟುವಟಿಕೆಗಳು ಸುಧಾರಣೆ ಆಗ್ತಿದೆ. ಹೀಗಾಗಿ ಕಂಪ್ಲೀಟ್ ಲಾಕ್ ಡೌನ್ ಬದಲಿಗೆ ಸೆಮಿ ಲಾಕ್ ಡೌನ್ ಗೆ ಸಿಎಂ ಒಲವು‌, ಸಧ್ಯಕ್ಕೆ ಸಿಲಿಕಾನ್ ಸಿಟಿಯಲ್ಲು ಸಂಪೂರ್ಣ ಲಾಕ್ ಡೌನ್ ಇಲ್ಲ. ಆದರೆ ಬೆಂಗಳೂರನ್ನ ಸೆಮಿ-ಲಾಕ್ ಮಾಡಬಹುದು

>ಸಾರ್ವಜನಿಕ ಸಾರಿಗೆಯಲ್ಲಿ 50% ಕಾರ್ಯಾಚರಣೆಗೆ ಅವಕಾಶ
ಬಸ್, ಮೆಟ್ರೋದಲ್ಲಿ 50% ಸೀಟು ಮಾತ್ರ ತುಂಬಲು ಅವಕಾಶ ನೀಡಬಹುದು. ಸಾರ್ವಜನಿಕ ಸಾರಿಗೆ ಬಳಸಲು ಎರಡು ಡೋಸ್ ಕಡ್ಡಾಯ ಮಾಡಬಹುದು.

> ಕಾರ್ಖಾನೆಗಳು, ಐಟಿ-ಬಿಟಿ ಕಂಪನಿಗಳಿಗೆ 50% ಕಾರ್ಯಾಚರಣೆ ಅಥವಾ ವರ್ಕ್ ಫ್ರಮ್ ಹೋಂಗೆ ಸೂಚನೆ ನೀಡಬಹುದು.

> ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಲ್ಲಿ 50% ಕಾರ್ಯಾಚರಣೆ ಉಳಿದ 50% ವರ್ಕ್ ಫ್ರಮ್ ಹೋಂಗೆ ಸೂಚನೆ.

> ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ನೈಟ್ ಕರ್ಫ್ಯೂ ವಿಸ್ತರಣೆ ಬಹುತೇಕ ಖಚಿತ.

> ಮಾಲ್, ಸಿನಿಮಾ ಹಾಲ್ ಗೆ 50% ಮಾತ್ರ ಅನುಮತಿ.

> ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ನಿಷೇಧ.

> ಬಾರ್, ಪಬ್, ಹೊಟೇಲ್ 50% ಕಾರ್ಯಾಚರಣೆಗೆ ಅವಕಾಶ ಸಾಧ್ಯತೆ.

> ಪಾರ್ಕ್ ಗಳಲ್ಲಿ ವಾಕಿಂಗ್ ಗೆ ಸಮಯ ನಿಗಧಿ ಮಾಡುವ ಸಾಧ್ಯತೆ.

> ಮಾರುಕಟ್ಟೆ, ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರಕ್ಕೆ ಸಮಯ ನಿಗಧಿ ಸಾಧ್ಯತೆ.

> ಜಿಮ್, ಕ್ರೀಡಾ ಸಂಕೀರ್ಣಗಳಿಗೆ 50% ಕಾರ್ಯಾಚರಣೆಗೆ ಅವಕಾಶ ಸಾಧ್ಯತೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...