alex Certify ಕೊರೊನಾ ಸೋಂಕಿತರಾಗಿ ಹೋಂ ಐಸೋಲೇಷನ್‌ ನಲ್ಲಿರುವವರಿಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರಾಗಿ ಹೋಂ ಐಸೋಲೇಷನ್‌ ನಲ್ಲಿರುವವರಿಗೆ ತಿಳಿದಿರಲಿ ಈ ಮಾಹಿತಿ

ಕೊರೋನಾ ವೈರಸ್ ವೇಗವಾಗಿ ಹರಡುತ್ತೆ ಅನ್ನೋದಕ್ಕೆ ಹೊಸ ಪುರಾವೆಗಳೇನು ಬೇಕಿಲ್ಲ. ಅದ್ರಲ್ಲೂ ಅದರ ಹೊಸ ರೂಪಾಂತರ ಒಮಿಕ್ರಾನ್ ಮತ್ತಷ್ಟು ವೇಗವಾಗಿ ಜನರನ್ನ ಸೋಂಕುಗೊಳಿಸುತ್ತಿದೆ. ಸೌಮ್ಯ ಸ್ವರೂಪದ ಈ ವೈರಸ್ಗೆ ಸಾಕಷ್ಟು ಸೋಂಕಿತರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಚಿಕಿತ್ಸೆಗೆ ಒಳಗಾದಾಗ ಹಾಗೂ ಸೋಂಕಿನಿಂದ ಗುಣಮುಖರಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಜೊತೆಗೆ ನೈರ್ಮಲ್ಯದ ಬಗ್ಗೆ ಅಮೆರಿಕಾದ ಸಿಡಿಸಿ ಮಾಹಿತಿ‌ ನೀಡಿದೆ.

ಸೋಂಕಿತರು ತೆಗೆದುಕೊಳ್ಳಬೇಕಾದ ಕ್ರಮಗಳು..?

ಸೋಂಕಿಗೆ ಒಳಗಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುವವರು ಪ್ರತ್ಯೇಕ ಕೋಣೆ ಮತ್ತು ಬಾತ್ ರೂಮ್ ಬಳಸಬೇಕು.

ಸೋಂಕಿತರು ಸ್ಪರ್ಶಿಸಿರುವ ವಸ್ತುಗಳನ್ನ ಮನೆಯ ಇತರ ಸದಸ್ಯರು ಮುಟ್ಟದಂತೆ ಗಮನ ವಹಿಸಬೇಕು.

ಸೋಂಕಿತರು ಐಸೋಲೇಟ್ ಆಗಿರುವ ಕೋಣೆಯನ್ನ ಅವರೇ ಸ್ವಚ್ಛಗೊಳಿಸಬೇಕು. ಪ್ರತಿದಿನ ಕೋಣೆಯನ್ನು ಡಿಸ್ ಇನ್ಫೆಕ್ಟ್ ಮಾಡಬೇಕು.

ಈ ಕೆಲಸಗಳನ್ನ ಮಾಡದಷ್ಟು ಸುಸ್ತು ಇದ್ದರೆ ಮನೆಯ ಒಬ್ಬ ಸದಸ್ಯ ಮಾತ್ರ ಈ ಜವಾಬ್ದಾರಿ ವಹಿಸಿಕೊಳ್ಳಬೇಕು.

ಸೋಂಕಿತರು ಮುಟ್ಟುವ ಪ್ರತಿಯೊಂದು ವಸ್ತುಗಳನ್ನ ಡಿಸ್ ಇನ್ಫೆಕ್ಟ್ ಮಾಡಬೇಕು. ಅವರು ಮಲಗುವ ಹಾಸಿಗೆಯಿಂದಿಡಿದು, ಮುಟ್ಟುವ ಬಾತ್ ರೂಮ್‌ಡೋರ್, ಫ್ಲಶ್ ಪ್ರತಿಯೊಂದು ಸೋಂಕುರಹಿತವಾಗುವಂತೆ ನೋಡಿಕೊಳ್ಳಬೇಕು.

ಕೊರೋನಾದಿಂದ ಗುಣಮುಖರಾದ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳು

ಮೊದಲು ಅವರು ಬಳಸಿದ್ದ ಕೋಣೆ ಹಾಗೂ ಬಾತ್ರೂಮನ್ನ ಒಂದು ವಾರದವರಗೆ ಮುಚ್ಚಿಬಿಡಿ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಆ ಕೋಣೆಯ ಅಗತ್ಯವಿಲ್ಲದಿದ್ದರೆ ಈ ಕ್ರಮ ಕೈಗೊಳ್ಳವುದೇ ಉತ್ತಮ.‌

ಇದು ಸಾಧ್ಯವಿರದಿದ್ದರೆ, ಡೀಪ್ ಕ್ಲೀನ್ ಮಾಡಿ ಎಂದು ಸಿಡಿಸಿ ಸಲಹೆ ನೀಡುತ್ತದೆ. ಸೋಂಕಿತ ಸ್ಪರ್ಶಿಸಿದ್ದ ಪ್ರತಿಯೊಂದು ವಸ್ತು, ಕೋಣೆ, ಪ್ಲೇಟ್, ವಾಟರ್ ಬಾಟಲ್ ಸೇರಿದಂತೆ ಎಲ್ಲವನ್ನು ಡಿಸ್ ಇನ್ಫೆಕ್ಟ್ ಮಾಡಿ.

ಮಾರುಕಟ್ಟೆಯಲ್ಲಿ ಹಲವು ಡಿಸ್ ಇನ್ಫೆಕ್ಟ್ ಲಿಕ್ವಿಡ್ ಗಳಿವೆ, ಅವುಗಳನ್ನ ಬಳಸಿ ಇಡೀ ಕೋಣೆಯನ್ನ ಕೀಟಾಣುಮುಕ್ತ ಮಾಡಿ. ಇದರಿಂದ ಎಲ್ಲಾ ವೈರಸ್ ಹಾಗೂ ಕೀಟಾಣುಗಳು ಸಾಯುವುದಿಲ್ಲ, ಆದರೆ ಖಂಡಿತ ಕಡಿಮೆಯಾಗುತ್ತವೆ. ಈ ಸಂದರ್ಭದಲ್ಲಿ ಫೇಸ್ ಮಾಸ್ಕ್ ಹಾಗೂ ಗ್ಲೌಸ್ ಬಳಸಲೇಬೇಕು. ಬಿಸಿ ನೀರು ಬಳಸುವುದು ಅತ್ಯುತ್ತಮ.

ನೆಲ ಒರೆಸಿದ ನಂತರ ಕಿಟಕಿ, ಬಾಗಿಲುಗಳನ್ನ ಸ್ವಚ್ಛಗೊಳಿಸಿ. ಸ್ವಚ್ಛತಾ ಕಾರ್ಯ ಪ್ರಾರಂಭಿಸುವ ಮೊದಲು ಕೈಗವಸುಗಳ ಮೇಲೆ ಸ್ಯಾನಿಟೈಸರ್ ರಬ್ ಮಾಡಿ. ಇಪಿಎ-ಅನುಮೋದಿತ ಉತ್ಪನ್ನಗಳಾದ ಲೈಜೋಲ್ ಅಥವಾ ಡೆಟಾಲ್ ಸರ್ಫೇಸ್ ಕ್ಲೀನರ್ ಅನ್ನು ಬಳಸಬಹುದು.

ಕಾರ್ಪೆಟ್ಗಳು, ರಗ್ಗುಗಳು ಮತ್ತು ಪರದೆಗಳನ್ನು ಪ್ರತ್ಯೇಕವಾಗಿ ತೊಳೆದುಕೊಳ್ಳಿ. ಇವುಗಳನ್ನ ಗಾಳಿಯಲ್ಲಿ ಒದರಬೇಡಿ ಇದರಿಂದ ವೈರಸ್ ಗಾಳಿಯಲ್ಲಿ ಹರಡಬಹುದು. ಇನ್ನುಳಿದಂತೆ ಪ್ರತ್ಯೇಕವಾಗಿ ವಾಷಿಂಗ್ ಮಷಿನ್ ಅಥವಾ ಕೈಯ್ಯಲ್ಲಿಯೆ ಇವುಗಳನ್ನ ಸ್ವಚ್ಛಗೊಳಿಸಿ.

ಸೆಲ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಟಚ್ ಸ್ಕ್ರೀನ್‌ಗಳು, ರಿಮೋಟ್ ಕಂಟ್ರೋಲ್‌ಗಳು ಮತ್ತು ಕೀಬೋರ್ಡ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಮೇಲ್ಮೈಯನ್ನ ಮೊದಲು ಸ್ವಚ್ಛಗೊಳಿಸಿ.‌ ಆನಂತರ ಕನಿಷ್ಠ 70 ಪ್ರತಿಶತದಷ್ಟು ಆಲ್ಕೋಹಾಲ್ ಹೊಂದಿರುವ ಆಲ್ಕೋಹಾಲ್ ಆಧಾರಿತ ವೈಪ್‌ಗಳು ಅಥವಾ ಸ್ಪ್ರೇಗಳನ್ನು ಬಳಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...