ಬೆಂಗಳೂರು: ಕೋವಿಡ್ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಂಡವರಲ್ಲಿಯೂ ಕೂಡ ಸೋಂಕು ಕಾಣಿಸಿಕೊಳ್ಳುತ್ತಿದೆ. ವ್ಯಾಕ್ಸಿನ್ ಪಡೆದ ನಂತರವೂ ಹಲವರು ತೊಂದರೆಗೀಡಾಗಿದ್ದಾರೆ ಎಂಬುದು ಆತಂಕಕಾರಿ ವಿಚಾರ. ಇಂತಹ ಸಂದರ್ಭದಲ್ಲಿ ಲಸಿಕೆ ಪಡೆಯಬೇಕೇ ಅಥವಾ ಬೇಡವೇ ಎಂಬ ಗೊಂದಲ ಅನೇಕರಲ್ಲಿ ಮನೆ ಮಾಡಿದೆ. ನಿಜಕ್ಕೂ ಲಸಿಕೆ ಅಗತ್ಯವಿದೆಯೇ ? ಕೊರೊನಾ ಸೋಂಕು ಕಂಡು ಬಂದಲ್ಲಿ ಲಸಿಕೆ ಪಡೆದುಕೊಳ್ಳಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಗೆ ಉತ್ತರವಾಗಿ ಡಾ. ರಾಜು ತಮ್ಮ ಈ ಹೊಸ ವಿಡಿಯೋದಲ್ಲಿ ಮಹತ್ವದ ಸಲಹೆ ನೀಡಿದ್ದಾರೆ.
ಒಂದೊಮ್ಮೆ ಕೊರೊನಾ ಪಾಸಿಟಿವ್ ಬಂದಿದ್ದರೆ ಅಥವಾ ಕೋವಿಡ್ ನ ಸಾಮಾನ್ಯ ಗುಣ ಲಕ್ಷಣಗಳು ಕಂಡುಬಂದಿದ್ದರೆ ಯಾವುದೇ ಕಾರಣಕ್ಕೂ ವ್ಯಾಕ್ಸಿನ್ ಪಡೆದುಕೊಳ್ಳಬೇಡಿ. ಕಾರಣ ವ್ಯಕ್ತಿಯಲ್ಲಿ ಇನ್ ಫೆಕ್ಷನ್ ಆಗಿದ್ದರೆ ಆ ವ್ಯಕ್ತಿಯಲ್ಲಿ ತಾನಾಗಿಯೇ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಕೋವಿಡ್ ಇನ್ ಫೆಕ್ಷನ್ ಆದವರು ಲಸಿಕೆ ಪಡೆದು ತೊಂದರೆಗೀಡಾದವರೇ ಹೆಚ್ಚು. ಹಾಗಾಗಿ ವ್ಯಾಕ್ಸಿನೇಷನ್ ಪಡೆಯುವ ಮುನ್ನ ಎಚ್ಚರಿಕೆ ಇರಲಿ ಎಂದು ಡಾ.ರಾಜು ಹೇಳಿದ್ದಾರೆ.
ಆರೋಗ್ಯಕರ ಎಳ್ಳು ಜ್ಯೂಸ್ ಸವಿಯಿರಿ
ಲಸಿಕೆ ಪಡೆದುಕೊಂಡ ಮಾತ್ರಕ್ಕೆ ನೂರಕ್ಕೆ ನೂರಷ್ಟು ಸೇಫ್, ಕೋವಿಡ್ ಪಾಸಿಟಿವ್ ಬರುವುದಿಲ್ಲ ಎಂಬುದು ಸುಳ್ಳು. ಈ ಬಗ್ಗೆ ಯಾರೂ ಕೂಡ ಸ್ಪಷ್ಟನೆ ನೀಡುವುದಿಲ್ಲ. ಆದರೆ ಸೋಂಕಿನ ಲಕ್ಷಣ ಕಂಡುಬಂದು ಗುಣಮುಖರಾಗಿದ್ದರೆ ಲಸಿಕೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ರಾಜು ಅವರ ಈ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ…..