ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಒಟ್ಟಾರೆ ಶಾಲಾ ದಾಖಲಾತಿಗಳು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 28 ಲಕ್ಷಕ್ಕೂ ಅಧಿಕ ಇದ್ದರೂ ಸಹ ಸುಮಾರು 40 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಅನುದಾನಿತ, ಖಾಸಗಿ ಶಾಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ವರ್ಗಾವಣೆಯಾಗಿದ್ದಾರೆ.
ಏಕಿಕೃತ ಜಿಲ್ಲಾ ಮಾದರಿ ವ್ಯವಸ್ಥೆಯ ಇತ್ತೀಚಿನ ವರದಿಯಲ್ಲಿ ಶಾಲೆಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಒಟ್ಟು ದಾಖಲಾತಿ ಅನುಪಾತವು ಸುಧಾರಿಸಿದೆ ಎಂದು ತಿಳಿದುಬಂದಿದೆ.
ಪೂರ್ವ ಪ್ರಾಥಮಿಕ ಹಾಗೂ 1ನೇ ತರಗತಿಗೆ ದಾಖಲಾಗುವ ಮಕ್ಕಳು ಕೊರೊನಾ ಸಾಂಕ್ರಾಮಿಕದಿಂದ ದಾಖಲಾಗಿರಲಿಲ್ಲ. 2019-20ನೇ ಸಾಲಿಗೆ ಹೋಲಿಸಿದರೆ 2020-21ರಲ್ಲಿ 1ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ಕ್ರಮವಾಗಿ 29.1 ಲಕ್ಷ ಮತ್ತು 18.8ಕ್ಕೆ ಲಕ್ಷಕ್ಕೆ ಇಳಿಕೆ ಕಂಡಿತ್ತು.
2020-21ನೇ ಸಾಲಿನಲ್ಲಿ ಪ್ರಾಥಮಿಕ ಹಂತದಿಂದ ಹೈಯರ್ ಸೆಕೆಂಡರಿ ಹಂತದವರೆಗೆ ಒಟ್ಟು ದಾಖಲಾತಿ 25 ಕೋಟಿಗಿಂತ ಹೆಚ್ಚಿದ್ದು ಸುಮಾರು 13 ಕೋಟಿ ಹುಡುಗರು ಹಾಗೂ 12 ಕೋಟಿ ಹುಡುಗಿಯರು ಸೇರಿದ್ದಾರೆ.