alex Certify ಕೊರೊನಾ ಸಂದರ್ಭದಲ್ಲಿ ಸರ್ಕಾರದ ಕೈ ಹಿಡಿದ ಮದ್ಯ ಪ್ರಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂದರ್ಭದಲ್ಲಿ ಸರ್ಕಾರದ ಕೈ ಹಿಡಿದ ಮದ್ಯ ಪ್ರಿಯರು..!

ಬೆಂಗಳೂರು : ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಸೃಷ್ಟಿಯಾಗಿದ್ದು, ಬಹುತೇಕ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಾಗಿ ಸರ್ಕಾರದ ಆದಾಯ ಕೂಡ ತೀವ್ರವಾಗಿ ಕುಸಿದಿತ್ತು. ಆದರೆ, ಈ ಸಂದರ್ಭದಲ್ಲಿ ಸರ್ಕಾರದ ಕೈಯನ್ನು ಮದ್ಯಪ್ರಿಯರು ಹಿಡಿದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ 64,859.98 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿದೆ. ಅದರಲ್ಲಿಯೂ ಕೊರೊನಾ ಸಂಕಷ್ಟ ಕಾಲದ ಸಮಯದಲ್ಲಿಯೇ ಎಣ್ಣೆ ಪ್ರಿಯರೂ ಹೆಚ್ಚಾಗಿ ಮದ್ಯ ಖರೀದಿಸಿದ್ದು, ಅಂಕಿ – ಸಂಖ್ಯೆಯಿಂದ ಬಹಿರಂಗವಾಗುತ್ತಿದೆ.

ಸರ್ಕಾರ ಹಾಗೂ ಅಬಕಾರಿ ಇಲಾಖೆಯ ಅಂಕಿ ಅಂಶದ ಪ್ರಕಾರ 2020-21ರಲ್ಲಿ 23,332.10 ಕೋಟಿ ರೂಪಾಯಿ, 2019-20ರಲ್ಲಿ 21,589.95 ಕೋಟಿ ರೂಪಾಯಿ ಹಾಗೂ 2018-29ರಲ್ಲಿ 19,943.93 ಕೋಟಿ ರಾಜಸ್ವ ಸಂಗ್ರಹವಾಗಿದೆ.

ಸಿಎಂ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ಕೋರ್ ಕಮಿಟಿ ಸಭೆ ದಿಢೀರ್ ಮುಂದೂಡಿಕೆ

ಕಳೆದೆರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಲಾಕ್ ಡೌನ್, ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆಗ ಬಹುತೇಕ ಉದ್ಯಮಗಳು ನಷ್ಟ ಅನುಭವಿಸಿದ್ದವು. ಹೀಗಾಗಿ ಸರ್ಕಾರ ಕೂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮದ್ಯ ಪ್ರಿಯರು ಮಾತ್ರ ಸರ್ಕಾರದ ಆದಾಯದ ಕ್ರೂಢೀಕರಣದಲ್ಲಿ ಸಹಾಯವಾಗಿದ್ದಾರೆ.

ಸದ್ಯ ಅಬಕಾರಿ ಇಲಾಖೆ ರಾಜಸ್ವ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...