ಕೊರೊನಾದಿಂದಾಗಿ ಬಡವರ ಸ್ಥಿತಿ ಶೋಚನೀಯವಾಗುತ್ತಿದ್ದರೆ, ಕೆಲವು ಶ್ರೀಮಂತರ ಆರ್ಥಿಕ ಸ್ಥಿತಿ ವೃದ್ದಿಯಾಗುತ್ತಿದೆ. ಈ ಕುರಿತು ವರ್ಲ್ಡ್ ಎಕನಾಮಿಕ್ ಫೋರಮ್ ನ ವರದಿಯೊಂದು ತಿಳಿಸಿದ್ದು, ವಿಶ್ವದ 10 ಶ್ರೀಮಂತರ ಸಂಪತ್ತು ವೃದ್ದಿಗೊಂಡಿದೆ ಎಂದು ಹೇಳಿದೆ.
ಇವರ ಆದಾಯ ದಿನವೊಂದಕ್ಕೆ ಸರಾಸರಿ 1.3 ಶತಕೋಟಿ ಡಾಲರ್ ದರದಲ್ಲಿ 1.5 ಲಕ್ಷ ಕೋಟಿ ಡಾಲರ್ ನಷ್ಟು ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 111.43 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.
ಕೊರೊನಾದಿಂದಾಗಿ ವಿಶ್ವದಲ್ಲಿ ಬರೋಬ್ಬರಿ 160 ಮಿಲಿಯನ್ ಜನರು ಬಡತನ ರೇಖೆಗಿಂತ ಕೆಳಗೆ ಇಳಿದಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ವಿಶ್ವದ ಶ್ರೀಮಂತ ಜನರ ಜಾಗತಿಕ ಸಂಪತ್ತಿನ ಪಾಲು ದಾಖಲೆ ಮಾಡಿದೆ.
ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವದ ಶ್ರೀಮಂತರಾಗಿದ್ದಾರೆ. ಇವರ ಆದಾಯ ಕೂಡ ಹೆಚ್ಚಿನ ಗಳಿಕೆ ಕಂಡಿದೆ. ಇನ್ನುಳಿದಂತೆ ಬೆಜೋಸ್, ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್, ಮಾರ್ಕ್ ಜುಕರ್ ಬರ್ಗ್, ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಲ್ಮರ್, ಲ್ಯಾರಿ ಎಲಿಸನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದವರಾಗಿದ್ದಾರೆ.